Sunday, December 7, 2025
Google search engine
Homeದೇಶದೇಶಾದ್ಯಂತ 5ಕ್ಕೇರಿದ ಎಚ್ ಎಂವಿ ವೈರಸ್ ಪ್ರಕರಣ: ಆತಂಕ ಬೇಡ ಎಂದ ಕೇಂದ್ರ

ದೇಶಾದ್ಯಂತ 5ಕ್ಕೇರಿದ ಎಚ್ ಎಂವಿ ವೈರಸ್ ಪ್ರಕರಣ: ಆತಂಕ ಬೇಡ ಎಂದ ಕೇಂದ್ರ

ಎಚ್ ಎಂವಿ ವೈರಸ್ ದೇಶಾದ್ಯಂತ ಹರಡಿದ್ದು, ದೇಶದಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 2 ಎಚ್ ಎಂವಿಪಿ ಸೋಂಕು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಗುಜರಾತ್ ನ ಅಹಮದಾಬಾದ್, ಪಶ್ಚಿಮ ಬಂಗಳಾದ ಕೋಲ್ಕತಾ ಹಾಗೂ ತಮಿಳುನಾಡಿನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಪತ್ತೆಯಾಗಿರುವ ಪ್ರಕರಣಗಳು ಹಳೆಯ ವೈರಸ್ ಆಗಿದ್ದು, ಚೀನಾದ ವೈರಸ್ ಅಲ್ಲ. ಆದ್ದರಿಂದ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ವೇಳೆ ಭಾರತದಲ್ಲಿ ಪತ್ತೆಯಾದ ಎಲ್ಲಾ ಪ್ರಕರಣಗಳು 1 ವರ್ಷದೊಳಗಿನ ಮಕ್ಕಳದ್ದಾಗಿದ್ದು, ಇವರಿಗೆ ಯಾವುದೇ ಕೇಸ್ ಹಿಸ್ಟರಿ ಇಲ್ಲ. ಅಲ್ಲದೇ ಬೆಂಗಳೂರಿನಲ್ಲಿ ಪತ್ತೆಯಾಗಿದ್ದ 3 ತಿಂಗಳ ಮಗು ಡಿಸ್ಚಾರ್ಜ್ ಆಗಿದ್ದು, ಇನ್ನೊಂದು 8 ತಿಂಗಳ ಮಗು ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments