ಹೊಳೆಯುವ ನಿನ್ನ ಚರ್ಮದ ಕಾಂತಿ ರಹಸ್ಯವೇನು? ಪ್ರತಿದಿನವೂ ಅದರ ಆರೈಕೆ ಹೇಗೆ ಮಾಡುತ್ತಿಯಾ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಹರ್ಲಿನ್ ಡಿಯೊಲ್ ಪ್ರಶ್ನಿಸಿದ್ದಾರೆ.
ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡದ ಆಟಗಾರ್ತಿಯನ್ನು ಭೇಟಿ ಮಾಡಿ ಮಾತುಕತೆ ವೇಳೆ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಮಾಡುವ ಹರ್ಲಿನ್ ಡಿಯೊಲ್ ಈ ಪ್ರಶ್ನೆ ಕೇಳಿದಾಗ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ನೀವು ತುಂಬಾ ಹೊಳೆಯುತ್ತಿದ್ದಿರಾ? ನಿಮ್ಮ ಚರ್ಮದ ಕಾಂತಿಗೆ ಪ್ರತಿದಿನ ಏನು ಮಾಡುತ್ತಿರಾ ಎಂದು ಪ್ರಶ್ನಿಸಿದಾಗ ನಾನು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂದು ಮೋದಿ ಉತ್ತರಿಸಿದ್ದಾರೆ.
ನಾನು ತುಂಬಾ ವರ್ಷಗಳಿಂದ ಸರ್ಕಾರದಲ್ಲಿ ಇದ್ದೀನಿ. ಇದು ನನಗೆ ಸಾಕಷ್ಟು ಶಕ್ತಿ ಕೊಡುತ್ತದೆ ಮತ್ತು ಹಲವರ ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮೇಲಿದೆ ಎಂದು ಅವರು ಹೇಳಿದರು.
ಇದೇ ವೇಳೆ ವಿಶ್ವಕಪ್ ಫೈನಲ್ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದೀಪ್ತಿ ಶರ್ಮ ಅವರನ್ನು ಉದ್ದೇಶಿಸಿ ಹನುಮಾನ್ ಟ್ಯಾಟೊ ಹಾಕಿಸಿಕೊಂಡಿದ್ದಿಯಲ್ಲಾ. ಇದರಿಂದ ನಿನಗೆ ಹೇಗೆ ನೆರವಾಯಿತು ಎಂದು ಪ್ರಶ್ನಿಸಿದ್ದಾರೆ.


