Friday, October 16, 2026
Google search engine
Homeರಾಜ್ಯಶತವಾಧಾನಿ ಡಾ.ಆರ್.‌ ಗಣೇಶ್‌ ಗೆ ಪದ್ಮಭೂಷಣ; ಕರ್ನಾಟಕದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ

ಶತವಾಧಾನಿ ಡಾ.ಆರ್.‌ ಗಣೇಶ್‌ ಗೆ ಪದ್ಮಭೂಷಣ; ಕರ್ನಾಟಕದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ

2026ರ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕರ್ನಾಟಕ 8 ಗಣ್ಯರಿಗೆ ಪದ್ಮ ಪ್ರಶಸ್ತಿಗೆ ಆಯೆ ಮಾಡಿದೆ.

ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಭಾನುವಾರ ಪ್ರಕಟಿಸಿದೆ. ಈ ಬಾರಿ ಕರ್ನಾಟಕದ 8 ಸಾಧಕರು ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.

ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅಪೂರ್ವ ಸೇವೆ ಮತ್ತು ಸಾಧನೆಗಾಗಿ ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಕರ್ನಾಟಕದ 7 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದ್ದು, ಪುಸ್ತಕ ಮನೆ ಖ್ಯಾತಿಯ ಅಂಕೇಗೌಡರಿಗೆ ಸಮಾಜ ಸೇವೆಗಾಗಿ, ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಡಾ. ಸುರೇಶ್ ಹನಗವಾಡಿ, ಸಮಾಜಸೇವೆಗಾಗಿ ಡಾ. ಎಸ್.ಜಿ. ಸುಶೀಲಮ್ಮ, ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ ಪ್ರಭಾಕರ ಕೋರೆ ಮತ್ತು ಶಶಿ ಶೇಖರ ವೆಂಪಾಟಿ ವಿಜ್ಞಾನ ಕ್ಷೇತ್ರದಲ್ಲಿನ ಸೇವೆಗಾಗಿ ಶುಭಾ ಅಯ್ಯಂಗಾರ್ ಕೈಗಾರಿಕೆ ವಿಭಾಗದಲ್ಲಿ ಟಿ.ಟಿ. ಜಗನ್ನಾಥನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments