ತೊಡೆ ತಟ್ಟಿದರೆ ತೊಡೆ ಮುರಿದು ಹಾಕ್ತೀವಿ, ತಲೆನೂ ತೇಗೆಯುತ್ತೇವೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಭೂಮಿ ನಮ್ಮದು ಅಂದರೆ ನೀವು ಎಲ್ಲಿಗೆ ಹೋಗುತ್ತೀರಿ? ಪಾಕಿಸ್ತಾನದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಗಂಟು ಮೂಟೆ ಕಟ್ಟಿ ಈಗಲೇ ಹೊರಡಿ ಎಂದು ಹೇಳಿದರು.
ಹಿಂದೂಗಳ ವಿಷಯದಲ್ಲಿ ರಾಜಕಾರಣ ಮಾಡಲ್ಲ. ದೇವಸ್ಥಾನದ ಮುಂದೆ ಯಾರೂ ಹೋಗಬಾರದು ಎಂದು ಹೇಳಿದ್ದಾರಾ? ಹಾಗೆ ಮಸೀದಿ ಮುಂದೆ ಯಾರೂ ಹೋಗಬಾರದು ಎಂದು ಹೇಳಲು ನೀವು ಯಾರು ಎಂದು ಪರೋಕ್ಷವಾಗಿ ಮುಸ್ಲಿಮ್ ಸಮುದಾಯದ ವಿರುದ್ಧ ಕಿಡಿಕಾರಿದರು.
ನಮ್ಮ ಮೇಲೆ ಸವಾಲು ಹಾಕಬೇಡಿ. ತೊಡೆ ತಟ್ಟಿ ಸವಾಲು ಹಾಕಿದರೆ ತೊಡೆ ಮುರಿಯುತ್ತೇವೆ. ಹಿಂದುಗಳು ತಲೆ ತೆಗೆಯೋದಿಕ್ಕು ಹಿಂದೆ ಮುಂದೆ ನೋಡುವುದಿಲ್ಲ ಎಂದು ಅವರು ಹೇಳಿದರು.
ಸಂಗಮೇಶ್ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಅಂತ ಹೇಳಿದ್ದಾರೆ. ಇಸ್ಲಾಂನಲ್ಲಿ ಪುನರ್ ಜನ್ಮದಲ್ಲಿ ನಂಬಿಕೆ ಇಲ್ಲ. ಹಾಗಿರುವಾಗ ಮುಂದಿನ ಜನ್ಮ ಹೇಗೆ ನಂಬುತ್ತೀರಿ. ಮುಂದಿನ ಜನ್ಮದಲ್ಲಿ ಮನುಷ್ಯನೋ, ನಾಯಿ, ಕತ್ತೆ, ಹಂದಿಯಾಗಿ ಹುಟ್ಟುವ ಬದಲು ಈಗಲೇ ಆ ಕೆಲಸ ಮಾಡಿ ಎಂದು ಅವರು ಕೆಣಕಿದರು.


