Sunday, December 7, 2025
Google search engine
Homeರಾಜಕೀಯದಲಿತರು ತಿರುಗಿಬಿದ್ದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

ದಲಿತರು ತಿರುಗಿಬಿದ್ದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

ಬೆಂಗಳೂರು: ದಲಿತರು ತಿರುಗಿಬಿದ್ದರೆ ಯಾರೂ ತಡೆಯಲು ಸಾಧ್ಯವಿಲ್ಲ. ನಾನಾ ಕಾರಣಗಳಿಗೆ ಅವರು ಸುಮ್ಮನಿದ್ದಾರೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಮಾತನಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿಯಲ್ಲಿ ಇದ್ದಾಗ ಬೆಂಗಳೂರು ಸುದ್ದಿ ಗಮನಿಸುತ್ತಿದ್ದೇನೆ. ಕೆಲವು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಇರಲಿಲ್ಲ. ನಮ್ಮವರೂ ಇದ್ದಾರೆ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಸಂವಿಧಾನಸ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಇತರರ ಕೊಡುಗೆ ಇರಲಿಲ್ಲ ಎಂದರು.

ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡಿ ಸಂವಿಧಾನದಲ್ಲಿ ಸಮಾನತೆ ಸಾರಿದ ಅಂಬೇಡ್ಕರ್ ಮಾನವತಾವಾದಿ. ಅಂತಹವರ ಬಗ್ಗೆ ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ದಲಿತರು ಸುಮ್ಮನಿದ್ದಾರೆ ಎಂದು ಭಾವಿಸಬೇಡಿ. ಒಂದು ವೇಳೆ ಅವರು ತಿರುಗಿಬಿದ್ದರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.

ಕಾಶ್ಮೀರದಲ್ಲಿ ಧರ್ಮ ನೋಡಿ ಉಗ್ರರು ಹತ್ಯೆ ಮಾಡಿರುವುದು ಖಂಡನೀಯ. ಇಂತಹ ದಾಳಿಗಳನ್ನು ಕಾಂಗ್ರೆಸ್ ಖಂಡಿಸುತ್ತದೆ. ಇಂತಹ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಬೆಂಬಲ ನೀಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸರ್ವ ಪಕ್ಷ ಸಭೆ ಕರೆದಿದ್ದ ಪ್ರಧಾನಿ ಮೋದಿಯೇ ಸಭೆಗೆ ಬರಲಿಲ್ಲ. ಈ ರೀತಿಯ ನಡೆ ಸರಿಯಲ್ಲ. ಮಹತ್ವ ಪಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳದ ಮೋದಿ ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಇದು ಅವರ ದೇಶಪ್ರೇಮ ತೋರಿಸುತ್ತದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಗ್ರರ ದಾಳಿ ಹಿಂದೆ ಭದ್ರತಾ ಲೋಪ ಆಗಿದೆ ಎಂದು ಕೇಂದ್ರ ಒಪ್ಪಿಕೊಂಡಿದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆ. ಆದರೆ ಸಭೆ ಕರೆದಿದ್ದ ಮೋದಿ. ಘಟನೆಯ ಮಾಹಿತಿಯನ್ನು ಪ್ರತಿಪಕ್ಷಗಳಿಗೆ ನೀಡಬೇಕಿತ್ತು. ದಾಳಿಯ ಹೊಣೆ ಹೊತ್ತಿದ್ದು ಯಾರು? ಘಟನೆ ಹೇಗೆ ಸಂಭವಿಸಿತು. ಏನೆಲ್ಲಾ ಲೋಪ ಆಗಿದೆ? ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ವಿವರಣೆ ನೀಡದೇ ಚುನಾವಣಾ ಪ್ರಚಾರಕ್ಕೆ ತೆರಳಿದ್ದು ಸರಿಯಲ್ಲ ಎಂದು ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments