ಆಫ್ರಿಕಾದ ಇಶ್ವಾಥಿನಿ ಕಿಂಗ್ ಮಾಸ್ವತಿ-3 ಅಬುಧಾಬಿಗೆ 15 ಪತ್ನಿಯರು ಹಾಗೂ 100 ಆಪ್ತರೊಂದಿಗೆ ಖಾಸಗಿ ವಿಮಾನದಲ್ಲಿ ಭೇಟಿ ನೀಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಸಾಂಪ್ರದಾಯಿಕ ಉಡುಗೆ ಧರಿಸಿದ ಮಾಸ್ವತಿ ಕಿಂಗ್ ಕಳೆದ ಜುಲೈ ತಿಂಗಳಲ್ಲಿ ಅಬುಧಾಬಿಗೆ ಭೇಟಿ ನೀಡಿದ್ದು, ಈ ವೇಳೆ ಪತ್ನಿಯರು ಹಾಗೂ ಆಪ್ತರೊಂದಿಗೆ ಬಂದಿಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜುಲೈನಲ್ಲಿ ಈ ವೀಡಿಯೊ ಮೊದಲ ಬಾರಿ ಪೋಸ್ಟ್ ಮಾಡಲಾಗಿದ್ದು, 15 ಪತ್ನಿಯರು ಮತ್ತು 100 ಆಪ್ತರೊಂದಿಗೆ ಅಬುಧಾಬಿಗೆ ಬಂದ ಸ್ವಿರ್ಜರ್ ಲೆಂಡ್ ಕಿಂಗ್ ಎಂದು ಶೀರ್ಷಿಕೆ ನೀಡಲಾಗಿತ್ತು.
ಮಾಸ್ವತಿ ಅಬುಧಾಬಿ ಭೇಟಿ ವೇಳೆ ತನ್ನ 30 ಮಕ್ಕಳನ್ನೂ ಕರೆತಂದಿದ್ದರು. ಮಾಸ್ವತಿ ತಂದೆ ಸೋಬೌಜಾ-2ಗೆ 125 ಪತ್ನಿಯರನ್ನು ಹೊಂದಿದ್ದರು.
ಇಶ್ವಾಥಿನಿ ಕಿಂಗ್ ತಮ್ಮ ವಿಶಿಷ್ಟ ಜೀವನಶೈಲಿಯಿಂದ ಗಮನ ಸೆಳೆದಿದ್ದು, ದೊಡ್ಡ ಬಣದೊಂದಿಗೆ ಅಬುಧಾಬಿಯಿಂದ ಭೇಟಿ ನೀಡಿದ್ದರಿಂದ ಸಮಸ್ಯೆಯಿಂದ ಹಲವು ಗಂಟೆಗಳ ಕಾಲ ಸಂಚಾರ ವ್ಯತ್ಯಾಸ ಉಂಟಾಗಿದೆ. ಅಲ್ಲದೇ ಹಲವು ಟರ್ಮಿನಲ್ ಗಳನ್ನು ಮುಚ್ಚಲಾಗಿದೆ.
ಮಾಸ್ವತಿ ಐಷಾರಾಮಿ ಜೀವನ ನಡೆಸುತ್ತಿದ್ದರೆ ಅವರ ಕಿರು ದೇಶದ ಜನರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ವ್ಯಾಪಕ ಟೀಕೆಗಳು ಕೇಳಿ ಬಂದಿವೆ.


