ಜೀವನಾಂಶ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿ ಭಾರತ ತಂಡದ ಮಧ್ಯಮ ವೇಗಿ ಮೊಹಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಚ್ಚೇದನಗೊಂಡ ಪತ್ನಿ ಹಸಿನ್ ಜಹಾನ್ ಕೋಲ್ಕತಾ ಹೈಕೋರ್ಟ್, ಪತ್ನಿಗೆ ಮಾಸಿಕ 1.5 ಲಕ್ಷ ರೂ. ಹಾಗೂ ಪುತ್ರಿಗೆ ಮಾಸಿಕ 2.5 ಲಕ್ಷ ರೂ. ಜೀವನಾಂಶ ನೀಡಬೇಕು ಎಂದು ಸೂಚಿಸಿತ್ತು.
ನ್ಯಾಯಾಲಯ ನೀಡಿದ ಜೀವನಾಂಶ ಸಾಕಾಗುವುದಿಲ್ಲ. ಆದ್ದರಿಂದ ಜೀವನಾಂಶ ಮೊತ್ತ ಹೆಚ್ಚಿಸಬೇಕು ಎಂದು ಹಸಿನ್ ಜಹಾನ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಚಾರಣೆಗೆ ಅರ್ಜಿ ಅಂಗೀಕರಿಸಿದ ವಿಭಾಗೀಯ ಪೀಠ, ತಿಂಗಳಿಗೆ 4 ಲಕ್ಷ ರೂ. ಸಾಕಾಗುವುದಿಲ್ಲವೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಹಸಿನ್ ಪರ ವಕೀಲರು, ಮೊಹಮದ್ ಶಮಿ ಆದಾಯ ಹಾಗೂ ಜೀವನಶೈಲಿಗೆ ಹೋಲಿಸಿದರೆ ಇದು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಇದೀಗ ಮೊಹಮದ್ ಶಮಿ ಹಾಗೂ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ 4 ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿ ಡಿಸೆಂಬರ್ ಗೆ ವಿಚಾರಣೆ ಮುಂದೂಡಿದೆ.
ಕೋಲ್ಕತಾ ಹೈಕೋರ್ಟ್ ಆದೇಶ ನೀಡುವಾಗ ಮೊಹಮದ್ ಶಮಿಗೆ ಇದ್ದ ಆದಾಯ ಹಾಗೂ ಆಸ್ತಿಗೆ ಹೋಲಿಸಿದರೆ ಈಗ ತುಂಬಾ ಹೆಚ್ಚಾಗಿದೆ. ಅಲ್ಲದೇ ನಾನು ಹಿಂದೆ ರೂಪದರ್ಶಿ ಆಗಿದ್ದು, ಗಂಡನಿಗಾಗಿ ನನ್ನ ವೃತ್ತಿಯನ್ನು ತೊರೆದಿದ್ದೆ. ಆದ್ದರಿಂದ ನನಗೆ ಹೆಚ್ಚಿನ ಜೀವನಾಂಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.


