Sunday, December 7, 2025
Google search engine
Homeಕ್ರೀಡೆಭಾರತ-ಪಾಕಿಸ್ತಾನಕ್ಕಿಂತ ಹೆಚ್ಚು ಮಂದಿ ಐಪಿಎಲ್ ಫೈನಲ್ ನೇರಪ್ರಸಾರ ವೀಕ್ಷಣೆ!

ಭಾರತ-ಪಾಕಿಸ್ತಾನಕ್ಕಿಂತ ಹೆಚ್ಚು ಮಂದಿ ಐಪಿಎಲ್ ಫೈನಲ್ ನೇರಪ್ರಸಾರ ವೀಕ್ಷಣೆ!

ವಿಶ್ವದಲ್ಲೇ ಅತೀ ಹೆಚ್ಚುವ ವೀಕ್ಷಿಸುವ ಭಾರತ- ಪಾಕಿಸ್ತಾನ ಪಂದ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಐಪಿಎಲ್ 2025ರ ಫೈನಲ್ ಪಂದ್ಯದ ನೇರ ಪ್ರಸಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ.

ಐಪಿಎಲ್ 18ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿದ್ದು, ಆರ್ ಸಿಬಿ ಮೊದಲ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಆರ್ ಸಿಬಿ ಮತ್ತು ಪಂಜಾಬ್ ನಡುವಣ ಐಪಿಎಲ್ ಫೈನಲ್ ಪಂದ್ಯದ ನೇರ ಪ್ರಸಾರವನ್ನು ಜಿಯೋ ಸ್ಟಾರ್ ನಲ್ಲಿ 67.8 ದಶಲಕ್ಷ ಜನರು ವೀಕ್ಷಿಸಿದ್ದಾರೆ. ಇದು ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕಿಂತ ಹೆಚ್ಚು ಜನರು ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಅಲ್ಲದೇ 18 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ವೀಕ್ಷಕರನ್ನು ಪಡೆದ ದಾಖಲೆ ಬರೆದಿದೆ.

ಜಿಯೋ ಹಾಟ್ ಸ್ಟಾರ್ ಅಲ್ಲದೇ ಒಟ್ಟಾರೆ ವೀಕ್ಷಕರ ಸಂಖ್ಯೆ 1 ಶತಕೋಟಿ ದಾಟಿದ್ದು, ಇದು ಕೂಡ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments