ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಆವೃತ್ತಿಯ ಡಬ್ಲೂಪಿಎಲ್ ಟಿ-20 ಕ್ರಿಕೆಟ್ ಟೂರ್ನಿಗೆ ನಾಯಕಿ ಸ್ಮೃತಿ ಮಂದಾನ ಸೇರಿ ನಾಲ್ವರು ಆಟಗಾರ್ತಿಯರನ್ನು ಉಳಿಸಿಕೊಂಡು ಉಳಿದವರನ್ನು ಬಿಡುಗಡೆ ಮಾಡಿದೆ.
ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವೆಂಬರ್ 27 ರಂದು ನಡೆಯಲಿದ್ದು ಗರಿಷ್ಠ 5 ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಲು ಗುಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ತಂಡಗಳು ಆಟಗಾರ್ತಿಯರನ್ನು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವವರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರ್ತಿಯರ ಪಟ್ಟಿಯಲ್ಲಿ ಮೂವರು ಭಾರತೀಯರು ಹಾಗೂ ಇಬ್ಬರು ವಿದೇಶೀಯರಿಗೆ ಸೀಮಿತ ಮಾಡಲಾಗಿತ್ತು. ಅಲ್ಲದೇ ಗರಿಷ್ಠ 3.5 ಕೋಟಿ ರೂ. ಹಾಗೂ ನಂತರ 2.5 ಕೋಟಿ, ರೂ. 1.75 ಕೋಟಿ, ರೂ. 1 ಕೋಟಿ ಮತ್ತು ರೂ. 50 ಲಕ್ಷ ನಿಗದಿಪಡಿಸಲಾಗಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಮೃತಿ ಮಂಧಾನ (3.5 ಕೋಟಿ ರೂ.) ಗರಿಷ್ಠ ಮೊತ್ತಕ್ಕೆ ತಂಡದಲ್ಲಿ ಉಳಿಸಿಕೊಂಡರೆ, ರಿಚಾ ಘೋಷ್ (2.75 ಕೋಟಿ ರೂ.), ಎಲಿಸಾ ಪೆರ್ರಿ (2 ಕೋಟಿ ರೂ.), ಮತ್ತು ಕನ್ನಡತಿ ಶ್ರೇಯಾಂಕ ಪಾಟೀಲ್ (60 ಲಕ್ಷ ರೂ.) ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಬಿಡುಗಡೆಯಾದ ಆಟಗಾರ್ತಿಯರು: ಡ್ಯಾನಿ ವ್ಯಾಟ್, ಸಬ್ಬಿನೇನಿ ಮೇಘನಾ, ಚಾರ್ಲಿ ಡೀನ್, ಜಾರ್ಜಿಯಾ ವೇರ್ಹ್ಯಾಮ್, ಹೀದರ್ ಗ್ರಹಾಂ, ಜೋಶಿತಾ ವಿಜೆ, ಕನಿಕಾ ಅಹುಜಾ, ಕಿಮ್ ಗಾರ್ತ್, ಪ್ರೇಮಾ ರಾವತ್, ರಾಘ್ವಿ ಬಿಸ್ಟ್, ಸ್ನೇಹ ರಾಣಾ, ನುಝತ್ ಪರ್ವೀನ್, ಏಕ್ತಾ ಬಿಷ್ತ್, ಜಾಗ್ರವಿ ಸಿಂಗ್, ರೇಣುಕಾ ಪವಾರ್.


