ನೀವು ಮುಗ್ಧರೇನೂ ಅಲ್ಲ ಎಂದು ಪತಂಜಲಿ ಸಂಸ್ಥೆ ಮುಖ್ಯಸ್ಥ ಯೋಗ ಗುರು ಬಾಬಾ ರಾಮ್ ದೇವ್ ಗೆ ಸುಪ್ರೀಂಕೋರ್ಟ್ ಛೀಮಾರಿ ಮುಂದುವರಿಸಿದೆ.
ಆಧುನಿಕ ವೈದ್ಯ ಪದ್ಧತಿ ಬಗ್ಗೆ ಅಪಪ್ರಚಾರ ಮಾಡಿ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸುಳ್ಳು ಜಾಹಿರಾತು ನೀಡಿದ್ದೂ ಅಲ್ಲದೇ ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ತಮ್ಮ ವಾದ ಮುಂದುವರಿಸುವ ಮೂಲಕ ನ್ಯಾಯಂಗ ನಿಂದನೆಗೆ ಗುರಿಯಾಗಿರುವ ಬಾಬಾ ರಾಮ್ ದೇವ್ ಮತ್ತು ಪತಂಜಲಿ ಸಂಸ್ಥೆ ಸಿಇಒ ಬಾಲಕೃಷ್ಣ ಅವರನ್ನು ಸುಪ್ರೀಂಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿತು.
ಇತ್ತೀಚೆಗಷ್ಟೇ ಭೇಷರತ್ ಕ್ಷಮೆಯಾಚನೆಯನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿದ್ದು, ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಏಪ್ರಿಲ್ 23ಕ್ಕೆ ವಿಚಾರಣೆ ಮುಂದೂಡಿತು.
ನಾವು ಆ ಸಮಯದಲ್ಲಿ ಏನು ಮಾಡಿದ್ದೇವೋ ಅದು ತಪ್ಪು. ಭವಿಷ್ಯದಲ್ಲಿ ಅದನ್ನು ಮುಂದುವರಿಸುವುದಿಲ್ಲ ಎಂದು ಬಾಬಾ ರಾಮ್ ದೇವ್ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.