ನಾಳೆಯಿಂದ 2ನೇ ಟೆಸ್ಟ್: ತಂಡಕ್ಕಾಗಿ ಆರಂಭಿಕ ಸ್ಥಾನ ತ್ಯಾಗ ಮಾಡಿದ ರೋಹಿತ್ ಶರ್ಮ
ಭಾರತ ತಂಡದ ನಾಯಕ ಶುಕ್ರವಾರ ಆರಂಭಗೊಳ್ಳಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ತಂಡದ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಅಗ್ರ ಕ್ರಮಾಂಕ ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಅಡಿಲೇಡ್ ನಲ್ಲಿ ಡಿಸೆಂಬರ್ 6ರಿಂದ ನಡೆಯಲಿರುವ ಪಿಂಕ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವುದನ್ನು ದೃಢಪಡಿಸಿದ್ದಾರೆ. ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಪ್ರಮುಖ…
ಜಡೇಜಾಗೆ 5 ವಿಕೆಟ್: ಕಿವೀಸ್ 235ಕ್ಕೆ ಆಲೌಟ್!
ಭಾರತದ ಸ್ಪಿನ್ ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನವೇ 235 ರನ್ ಗೆ ಆಲೌಟಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ…
4 ವರ್ಷಕ್ಕೆ ಮುರಿದುಬಿದ್ದ ಹಾರ್ದಿಕ್ – ನತಾಶಾ ದಾಂಪತ್ಯ: ಮಗನ ಜೊತೆ ತವರಿಗೆ ಮರಳಿದ ನತಾಶಾ!
ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರೂಪದರ್ಶಿ ನತಾಶಾ ನತಾಶಾ ಸ್ಟಾಂಕೊವಿಕ್ ದಾಂಪತ್ಯ ಅಧಿಕೃತವಾಗಿ ಮುರಿದುಬಿದ್ದಿದೆ. ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದ ವಿಚ್ಛೇದನ ವದಂತಿಯನ್ನು ಇಬ್ಬರೂ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನಾವು ಸಾಕಷ್ಟು ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ ಎಂದು ಇನ್ ಸ್ಟಾಗ್ರಾಂನಲ್ಲಿ ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿದ್ದಾರೆ. 2018ರಲ್ಲಿ ಮೊದಲ…
ಮೇಯರ್ಸ್ ಹೋರಾಟ ವ್ಯರ್ಥ: 2-1ರಿಂದ ಟಿ-20 ಸರಣಿ ಮುನ್ನಡೆ ಸಾಧಿಸಿದ ಭಾರತ
ಮಧ್ಯಮ ಕ್ರಮಾಂಕದಲ್ಲಿ ಡಿಯೊನ್ ಮೇಯರ್ಸ್ ಅಜೇಯ ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ ಭಾರತ ತಂಡ 23 ರನ್ ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿ 5ಪಂದ್ಯಗಳ ಟಿ-20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಹರಾರೆಯಲ್ಲಿ ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್…
2.5 ಕೋಟಿ ರೂ. ಹೆಚ್ಚವರಿ ಬೋನಸ್ ನಿರಾಕರಿಸಿದ ರಾಹುಲ್ ದ್ರಾವಿಡ್!
ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಬಿಸಿಸಿಐ ನೀಡಿದ್ದ ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂ. ಬೋನಸ್ ಸ್ವೀಕರಿಸಲು ನಿರಾಕರಿಸಿದ್ದಾರೆ. ಬಿಸಿಸಿಐ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿತ್ತು. ರಾಹುಲ್ ದ್ರಾವಿಡ್ ಗೆ 5 ಕೋಟಿ ರೂ. ಹಾಗೂ ಬ್ಯಾಟಿಂಗ್,…
ಕೊಹ್ಲಿ ನಂತರ ಟಿ-20ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮ!
ಭಾರತ ತಂಡ ಟಿ-20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮನ್ ಗಳಾಗಿ ದಶಕಗಳ ಕಾಲ ಭಾರತ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿದ್ದ ವಿರಾಟ್ ಕೊಹ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ಕೆಲವೇ ಕ್ಷಣಗಳಲ್ಲಿ ನಿವೃತ್ತಿ ಘೋಷಿಸಿದರೆ, ನಾಯಕ…
ಟಿ-20 ವಿಶ್ವಕಪ್ ಗೆದ್ದ ಭಾರತಕ್ಕೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು ಗೊತ್ತಾ?
ರೋಹಿತ್ ಶರ್ಮ ಸಾರಥ್ಯ, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಅಬ್ಬರ, ಬೌಲರ್ ಗಳ ಮಾರಕ ದಾಳಿ ಸೇರಿದಂತೆ ಸಂಘಟಿತ ಪ್ರದರ್ಶನದಿಂದ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 20.42 ಕೋಟಿ ರೂ. ಬಹುಮಾನ ಮೊತ್ತ ಲಭಿಸಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ…
ಒಂದೇ ದಿನದಲ್ಲಿ 525 ರನ್ ಪೇರಿಸಿ ಇತಿಹಾಸ ಸೃಷ್ಟಿಸಿದ ಭಾರತ ವನಿತೆಯರು!
ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮ ದ್ವಿಶತಕ ಹಾಗೂ ಸ್ಮೃತಿ ಮಂದಾನ ಶತಕಗಳ ನೆರವಿನಿಂದ ಭಾರತ ವನಿತೆಯರ ತಂಡ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನೇ 525 ರನ್ ಕಲೆ ಹಾಕಿ ಇತಿಹಾಸ ನಿರ್ಮಿಸಿದೆ. ಚೆನ್ನೈ ನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ…
ರನ್ ವೇಯಲ್ಲಿ ಲ್ಯಾಂಡಿಂಗ್ ವೈಫಲ್ಯ: ವಿಮಾನ ನಿಲ್ದಾಣದಲ್ಲಿ ಸಿಲುಕಿದ ದಕ್ಷಿಣ ಆಫ್ರಿಕಾ ಆಟಗಾರರು!
ಖಾಸಗಿ ವಿಮಾನವೊಂದರ ಲ್ಯಾಂಡಿಂಗ್ ವೈಫಲ್ಯದಿಂದ ದಕ್ಷಿಣ ಆಫ್ರಿಕಾ ಆಟಗಾರರು ಹಾಗೂ ಐಸಿಸಿ ಅಧಿಕಾರಿಗಳು ವೆಸ್ಟ್ ಇಂಡೀಸ್ ನ ಟ್ರಿನಿಡಾಡ್ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಘಟನೆ ವರದಿಯಾಗಿದೆ. ಭಾನುವಾರ ನಡೆಯಬೇಕಿರುವ ಬಾರ್ಬಡಾಸ್ ನಲ್ಲಿ ನಿಗದಿಯಾಗಿರುವ ಭಾರತ ವಿರುದ್ಧದ ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಹೊರಟ್ಟಿದ್ದ ದಕ್ಷಿಣ ಆಫ್ರಿಕಾ ಆಟಗಾರರು ಬರಬೇಕಿತ್ತು. ಆದರೆ ಟ್ರಿನಿಡಾಡ್ ವಿಮಾನ ನಿಲ್ದಾಣದಲ್ಲಿ ಆದ…
ಟಿ-20 ವಿಶ್ವಕಪ್: 68 ರನ್ನಿಂದ ಇಂಗ್ಲೆಂಡ್ ಸೋಲಿಸಿ ಟೀಂ ಇಂಡಿಯಾ ಫೈನಲ್ ಗೆ ಲಗ್ಗೆ
ಕ್ರಿಕೆಟ್ ಪಾಠ ಹೇಳಿಕೊಟ್ಟ ಬ್ರಿಟಿಷರನ್ನು ಸ್ಪಿನ್ ಬಲೆಗೆ ಕೆಡವಿದ ಭಾರತ ತಂಡ 68 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿ ಟಿ-20 ವಿಶ್ವಕಪ್ ನಲ್ಲಿ ಫೈನಲ್ ಪ್ರವೇಶಿಸಿದೆ. ಗಯಾನದಲ್ಲಿ ಮಳೆಯ ಅಡ್ಡಿಯ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್…