ನವದೆಹಲಿ: ಮಾಜಿ ಪ್ರಧಾಣಿ ಇಂದಿರಾ ಗಾಂಧಿ ಹತ್ಯೆ ಬಳಿಕ ದಿಲ್ಲಿಯಲ್ಲಿ ಸಮಭವಿಸಿದ ಸಿಖ್ ಹತ್ಯಾಕಾಂಡದಲ್ಲಿ ಭಾಗಿ ಆಗಿದ್ದ ಆರೋಪದ ಮೇಲೆ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿದಿಸಲಾಗಿದೆ.
1948ರಲ್ಲಿ ಜಸ್ವಂತ್ ಸಿಂಗ್ ಹಾಗೂ ಅವರ ಮಗ ತರುಣ್ ದೀಪ್ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪದ ಮೇರೆಗೆ ವಿಶೇಷ ನ್ಯಾಯಾಧೀಶ ಕಾವೇರಿ ಬಾವೇಜಾ ಅವರು ಸಜ್ಜನ್ ಕುಮಾರ್ ಅವರಿಗೆ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.
ಕುಮಾರ್ ಅವರಿಗೆ ಮರಣ ದಂಡನೆ ನೀಡಬೇಕೆಂದು ದೂರುದಾರರಾದ ಜಸ್ವಂತ ಸಿಂಗ್ ಪತ್ನಿ ಹಾಗೂ ಪ್ರಾಸಿಕ್ಯೂಷನ್ ಕೋರಿದ್ದರು. ಕೊಲೆ ಅಪರಾಧಕ್ಕೆ ಗರಿಷ್ಠ ಶಿಕ್ಷೆಯಾಗಿ ಮರಣ ದಂಡನೆ, ಕನಿಷ್ಠ ಶಿಕ್ಷೆಯಾಗಿ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ.
ಫೆಬ್ರವರಿ 12 ರಂದು ನ್ಯಾಯಾಲಯವು ಅಪರಾಧಕ್ಕಾಗಿ ಕುಮಾರ್ಗೆ ಶಿಕ್ಷೆ ವಿಧಿಸಿತ್ತು. ಅಲ್ಲದೇ ಸುಪ್ರೀಂಕೋರ್ಟ್ ಆದೇಶದ ದೃಷ್ಟಿಯಿಂದ ಅಪರಾಧಿಯ ಮನೋವೈದ್ಯಕೀಯ ಮತ್ತು ಮಾನಸಿಕ ಸ್ಥಿಮಿತತೆ ಕುರಿತು ತಿಹಾರ್ ಕೇಂದ್ರ ಕಾರಾಗೃಹದಿಂದ ವರದಿಯನ್ನು ಕೇಳಿತ್ತು. ಕುಮಾರ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ
ಸಜ್ಜನ್ ಕುಮಾರ್ಗೆ ಮರಣದಂಡನೆ ವಿಧಿಸುವಂತೆ ಪೊಲೀಸರು ಕೋರಿದ್ದರು. ಆದರೆ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಗುಂಪನ್ನು ಸಜ್ಜನ್ ಕುಮಾರ್ ಮುನ್ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ದೂರಿನ ಪ್ರಕಾರ, ಕೋಪಗೊಂಡ ಗುಂಪೊಂದು ದೂರುದಾರ ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ದಾಳಿ ಮಾಡಿ, ಅವರ ಪತಿ ಮತ್ತು ಮಗನನ್ನು ಕೊಲೆ ಮಾಡಿತ್ತು.
1948ರಲ್ಲಿ ಏನಾಯಿತು?:
ಸಿಖ್ಖರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸಶಸ್ತ್ರ ಗುಂಪೊಂದು ಸಿಖ್ಖರ ವಿರುದ್ಧ ದೊಡ್ಡ ಪ್ರಮಾಣದ ಬೆಂಕಿ ಹಚ್ಚುವಿಕೆ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಮುಂದಾಯಿತು. ಗುಂಪೊಂದು ಜಸ್ವಂತ್ ಸಿಂಗ್ ಮತ್ತು ಅವರ ಮಗನನ್ನು ಕೊಂದು ಅವರ ಮನೆಯನ್ನು ಲೂಟಿ ಮಾಡಿತು. ನಂತರ ಅವರು ಮನೆಯನ್ನು ಸುಟ್ಟುಹಾಕಿದ್ದರು. ಸಜ್ಜನ್ ಕುಮಾರ್ ಅವರೇ ಈ ಗುಂಪಿನ ನೇತೃತ್ವ ವಹಿಸಿ, ಕೊಲೆಯ ಮುಂದಾಳತ್ವ ವಹಿಸಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಕೂಡ ಸಿಕ್ಕಿತ್ತು.
1977ರಲ್ಲಿ ದೆಹಲಿ ಮಹಾನಗರ ಪಾಲಿಕೆಗೆ ಮೊದಲು ಆಯ್ಕೆಯಾದ ಸಜ್ಜನ್ ಕುಮಾರ್ ಅದೇ ವರ್ಷ ದೆಹಲಿ ಕೌನ್ಸಿಲರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ದೆಹಲಿಯ ಸಕ್ರಿಯ ರಾಜಕಾರಣಿಯಾಗಿದ್ದ ಅವರು 2204ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಿಂದ ಗೆದ್ದರು.


