Saturday, November 23, 2024
Google search engine
Homeಆರೋಗ್ಯಕ್ಸಾನ್ಸರ್ ತರುವ ದಿನ ಬಳಕೆಯ ಈ ವಸ್ತುಗಳು ಪ್ರತಿಯೊಬ್ಬರ ಮನೆಯಲ್ಲೂ ಇವೆ: ಎಚ್ಚರಿಕೆ!

ಕ್ಸಾನ್ಸರ್ ತರುವ ದಿನ ಬಳಕೆಯ ಈ ವಸ್ತುಗಳು ಪ್ರತಿಯೊಬ್ಬರ ಮನೆಯಲ್ಲೂ ಇವೆ: ಎಚ್ಚರಿಕೆ!

ಕ್ಯಾನ್ಸರ್ ಅತ್ಯಂತ ಮಾರಕ ಕಾಯಿಲೆ. ಇದು ಹೇಗೆ ಬರುತ್ತೆ ಅನ್ನೋದೇ ಬಹುತೇಕ ಮಂದಿಗೆ ಗೊತ್ತಾಗುವುದೇ ಇಲ್ಲ. ನಾವು ಮನೆಯಲ್ಲೇ ಬಳಸುವ ಹಲವಾರು ವಸ್ತುಗಳಿಂದಲೇ ಕ್ಸಾನ್ಸರ್ ನಮಗೆ ಬಂದಿದೆ ಎಂದು ತಿಳಿಯುವುದೇ ಇಲ್ಲ. ಅದರ ಬಗ್ಗೆ ಮುನ್ನೆಚ್ಚರಿಕೆಯನ್ನೂ ಸಹ ವಹಿಸುವುದಿಲ್ಲ.

ಕ್ಯಾನ್ಸರ್ ಗೆ ಕಾರಣವಾಗುವ ಅಂತಹ ಈ ಉತ್ಪನ್ನಗಳು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ನಾವು ಪ್ರತಿದಿನ ಬಳಸುವ ಈ ವಸ್ತುಗಳಲ್ಲಿ ಅಪಾಯಕಾರಿ ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳು ಇವೆ ಎಂಬುದು ನಿಮಗೆ ಗೊತ್ತೆ?

ನಾವು ಪ್ರತಿ ನಿತ್ಯ ಬಳಸುವ ಕ್ಲೀನಿಂಗ್ ಔಷಧಿಯಿಂದ ಹಿಡಿದು ಶಾಂಪೂವರೆಗೂ ಹಲವಾರು ವಸ್ತುಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳು ಇವೆ. ಅವು ಯಾವುವು ಎಂಬುದರ ಬಗ್ಗೆ ನಾವು ಪರಿಚಯ ಮಾಡಿಕೊಡುತ್ತೀವಿ ಓದಿ.

ಶಾಂಪೂ

ಕ್ಯಾನ್ಸರ್ ಗೆ ಕಾರಣವಾಗಿರುವ ಅಂಶ ಅಥವಾ ರಾಸಾಯನಿಕ ಇರುವ ದಿನ ಬಳಕೆಯ ವಸ್ತುಗಳಲ್ಲಿ ಕೂದಲಿಗೆ ಬಳಸುವ ಉತ್ಪನ್ನ ಪ್ರಮುಖವಾದುದು. ಅದರಲ್ಲೂ ಶಾಂಪೂ ಮತ್ತು ಕಂಡಿಷನರ್ ಗಳು ಹೆಚ್ಚು ಅಪಾಯಕಾರಿ. ಶಾಂಪೂಗಳಲ್ಲಿ ಸೋಡಿಯಂ ಲೌರಿಲ್ ಸಲ್ಫೆಟ್ (ಎಸ್ ಎಲ್ ಎಸ್), ಪರ್ಫೂಮ್. ಫ್ರಾಗೆನ್ಸಿ, ಪರಬೆನ್ಸ್, ಸಿಂಥೆಟಿಕ್ ಕಲರ್ಸ್ ಮುಂತಾದ ಎಂಬ ರಾಸಾಯನಿಕಗಳು ಇದರಲ್ಲಿರುತ್ತವೆ.

ಪರಬೆನ್ಸ್ ಎಂಬ ರಾಸಾಯನಿಕ ಕ್ಯಾರ್ಸಿಕಾನ್ (carcinogen) ಎಂಬ ಅಂಶ ಇದ್ದು, ಇದು ಹಲವಾರು ರೀತಿಯ ಕ್ಯಾನ್ಸರ್ ಗೆ ನೇರ ಕಾರಣವಾಗುತ್ತದೆ. ಸಮೀಕ್ಷೆಯೊಂದರ ಪ್ರಕಾರ ಸ್ತನ ಕ್ಯಾನ್ಸರ್ ಗೆ ಶೇ.99ರಷ್ಟು ಕ್ಯಾರ್ಸಿಕಾನ್ ಎಂಬ ರಾಸಾಯನಿಕ ಕಾರಣ ಎಂಬುದು ದೃಢಪಟ್ಟಿದೆ. ಅಲ್ಲದೇ ಪರ್ಫೂಮ್ ಮತ್ತು ಸಿಂಥೆಟಿಕ್ ಕಲರ್ಸ್ ರಾಸಾಯನಿಕಗಳು ಮಗುವಿನ ಜನನ ದೋಷ, ನರಗಳ ದೌರ್ಬಲ್ಯ ಹಾಗೂ ಕ್ಯಾನ್ಸರ್ ಗೆ ಕಾರಣವಾಗುತ್ತವೆ ಎಂಬುದು ಸಮೀಕ್ಷೆಗಳಲ್ಲಿ ಕಂಡು ಬಂದಿದೆ. ಹೆಡ್ ಅಂಡ್ ಶೋಲ್ಡರ್ ಶಾಂಪೋಗಳಲ್ಲಿ ಪರ್ಫೂಮ್ ಮತ್ತು ಸಿಂಥೆಟಿಕ್ ಕಲರ್ಸ್ ರಾಸಾಯನಿಕಗಳು ಹೆಚ್ಚಾಗಿ ಕಂಡು ಬಂದಿದೆ.

ನಾನ್ ಸ್ಟಿಕ್ ಕುಕ್ ವೇರ್

ನಾನ್ ಸ್ಟಿಕ್ ಅಡುಗೆ ಉಪಕರಣಗಳು ಈಗ ಅತ್ಯಂತ ಜನಪ್ರಿಯ. ಅಡುಗೆ ಮಾಡುವುದು, ತೊಳೆಯುವುದು ಸುಲಭ ಎಂಬ ಕಾರಣಕ್ಕೆ ಈ ನಾನ್ ಸ್ಟಿಕ್ ಥಾವಾ, ಕುಕ್ಕರ್ ಗಳು ಖರೀದಿಸುತ್ತೇವೆ. ಆದರೆ ಅದರಲ್ಲಿ ಆರೋಗ್ಯದ ಮೇಲೆ ಎಷ್ಟೆಲ್ಲಾ ಹಾನಿಕಾರಕ ಅಂಶಗಳಿವೆ ಎಂಬುದು ತಿಳಿದರೆ ಆಘಾತಕ್ಕೆ ಒಳಗಾಗುತ್ತೀರಾ.

ನಾನ್ ಸ್ಟಿಕ್ ಮಾಡಲು ಸಿಂಥೆಟಿಕ್ ಕೋಟಿಂಗ್ ಮಾಡಲಾಗುತ್ತದೆ. ಇದಕ್ಕಾಗಿ ಪಾಲಿತೆಟ್ರಾಫ್ಲೌರೆಥೈನ್ (polytetrafluoroethylene) ಅಥವಾ ಟೆಲ್ಫೋನ್ ಎಂಬ ರಾಸಾಯನಿಕ ಬಳಸಲಾಗುತ್ತದೆ. ಪ್ಲಾಸ್ಟಿಕ್ ಪಾಲಿಮರ್ 450 ಡಿಗ್ರಿಯಿಂದ ಹೆಚ್ಚು ಬಿಸಿಯಾದಾಗ ವಿಚಿತ್ರವಾದ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಸಮೀಕ್ಷೆ ಪ್ರಕಾರ ನಾನ್ ಸ್ಟಿಕ್ ನಲ್ಲಿ ಅಡುಗೆ ಮಾಡುವಾಗ 5ರಿಂದ 10 ನಿಮಿಷ ಬಿಸಿಯಾಗುವಷ್ಟು ಮಾತ್ರ ಬಳಸಬೇಕು. ನಂತರ ಬಳಸಿದರೆ ಅದರ ಕೋಟಿಂಗ್ ನಲ್ಲಿ ಬಿರುಕುಬಿಟ್ಟು ವಿಷಕಾರಿ ಅನಿಲ ಹೊರಸೂಸುತ್ತದೆ. ಟೆಫ್ಲೂನ್ ಜ್ವರ ಎಂಬುದು ಬರುವುದು ಇದರಿಂದಲೇ.

ಕೃತಕ ಸಿಹಿಪುಡಿಗಳು

ಕಾಫಿ, ಟೀ, ಮುಂತಾದ ಪಾನೀಯಗಳಿಗೆ ಡಯಟ್ ಫ್ರೀ ಎಂದು ಬರುವ ಸಿಹಿ ಪುಡಿಗಳು (ಸಕ್ಕರೆ) ಆರೋಗ್ಯಕ್ಕೆ ಹಾನಿಕಾರ. ಇದರಲ್ಲಿ ಕೇವಲ ಡಯೆಟ್ ಸೋಡಾ ಬಳಸಲಾಗುತ್ತದೆ ಎಂಬ ಕಲ್ಪನೆ ಹಲವರದ್ದು. ಆದರೆ ಇದನ್ನು ಬಳಸಿದ ಟೀ, ಕಾಫಿ, ಜ್ಯೂಸ್, ಪ್ರೋಟಿನ್ ಸ್ನ್ಯಾಕ್ಸ್, ಎನರ್ಜಿ ಡ್ರಿಂಕ್ಸ್ ಉತ್ತಮ ಆರೋಗ್ಯಕ್ಕೆ ಒಳ್ಳೆಯದಲ್ಲ.

2007ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಕೃತಕ ಸಿಹಿಗೆ ಬಳಸುವ ಅಸ್ಪಾಟ್ರೆಮ್ ರಾಸಾಯನಿಕ ಲ್ಯೂಕೆಮೆನಿಯಾ/ ಲಿಂಪೊಮಸ್ ಹಾಗೂ ಸ್ತನ ಕ್ಯಾನ್ಸರ್ ಗೆ ಕಾರಣವಾಗಬಹುದು. ನೀವು ಕೃತಕ ಸಕ್ಕರೆ ಬಳುಸುವುದಕ್ಕೆ ಜೇನುತುಪ್ಪ, ಸಹಜ ಸಕ್ಕರೆ, ಬೆಲ್ಲ, ಕಬ್ಬಿನ ಹಾಲು ಬಳಸುವುದು ಉತ್ತಮ.

ಪ್ಲಾಸ್ಟಿಕ್ ಬಾಟಲ್, ಆಹಾರ ಪೊಟ್ಟಣ

ಇತ್ತೀಚೆಗೆ ಬಾಟಲ್ ಗಳಲ್ಲಿ ನೀರು, ಆಹಾರ, ತರಕಾರಿ.. ಹೀಗೆ ಎಲ್ಲವನ್ನೂ ತರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದು ಕರಗದ ವಸ್ತು ಆಗಿರುವುದರಿಂದ ಪರಿಸರಕ್ಕೆ ಹಾನಿ. ಅಷ್ಟೇ ನಿಮ್ಮ ಅನಾರೋಗ್ಯಕ್ಕೂ ದಾರಿ ಎಂಬ ವಿಷಯ ಗೊತ್ತೆ?

ನೀರು ಕುಡಿಯುವಾಗ ಪದೇಪದೆ ನಿಮ್ಮ ತುಟಿ ಪ್ಲಾಸ್ಟಿಕ್ ಬಾಟಲ್ ಅನ್ನು ಸ್ಪರ್ಶಿಸುತ್ತದೆ. ಅಂದರೆ ಅದರರ್ಥ ಪ್ಲಾಸ್ಟಿಕ್ ನಿಮ್ಮ ದೇಹದೊಳಗೆ ಹೋಗುತ್ತಿದೆ ಎಂಬುದು. ಅದರಲ್ಲೂ ವಾಹನದಲ್ಲಿ ಹೋಗುವಾಗ ಇರಿಸಿದ್ದ ನೀರಿನ ಬಾಟೆಲ್ ಬಿಸಿಯಾದರೆ ಅದು ಇನ್ನಷ್ಟು ಅಪಾಯಕಾರಿ. ಏಕೆಂದರೆ ಕರಗಿದ ಪ್ಲಾಸ್ಟಿಕ್ ಅಂಶಗಳು ನೀರಿನೊಂದಿಗೆ ನೇರವಾಗಿ ನಿಮ್ಮ ದೇಹ ಪ್ರವೇಶಿಸುತ್ತದೆ.

ಕೆಲವು ಕಂಪನಿಗಳ ಬಾಟೆಲ್ ಗಳ ಮೇಲೆ ಬಿಪಿಎ ಫ್ರಿ ಎಂದು ನಮೂದಿಸಿರುತ್ತಾರೆ. ಅಂದರೆ ಬಿಪಿಎ ಅಂದರೆ ಕ್ಯಾನ್ಸರ್ ಗೆ ಕಾರಣವಾಗುವ ಅಂಶ. ಆದರೆ ಬಹುತೇಕ ಬಾಟೆಲ್ ಗಳಲ್ಲಿ ಇದು ಸರ್ವೆ ಸಾಮಾನ್ಯ ಕಂಡು ಬರುತ್ತದೆ.

ಏರ್ ಫ್ರೆಷನರ್ಸ್

ಈಗ ಏರ್ ಫ್ರೆಷನರ್ಸ್ ಅನ್ನೋ ಕ್ರೇಜ್ ಆಗಿದೆ. ಮನೆ, ಮಲಗುವ ಕೋಣೆ, ಕಾರು, ಹೋಟೆಲ್, ಅಂಗಡಿ, ಕಚೇರಿ ಎಲ್ಲೆಂದರಲ್ಲಿ ಬಳಸುವುದು ಸಾಮಾನ್ಯವಾಗಿದೆ. ಏರ್ ಫ್ರೆಷರ್ಸ್ ಸಿದ್ದಪಡಿಸಲು ಸಿಂಥೆಟಿಕ್ ಫ್ರಾಗ್ರೆನ್ಸಿ ಅಥವಾ ಪರ್ಫ್ಯೂಮ್ ಬಳಸಲಾಗುತ್ತದೆ. ಪರ್ಫ್ಯೂಮ್ ಮೂಲವಾಗಿ ಕಾಕ್ ಟೈಲ್ ರಾಸಯನಿಕ. ಸುವಾಸನೆ ಬರುವಂತೆ ಮಾಡುವ ಈ ರಾಸಯನಿಕ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.  ಬಹುತೇಕ ಕಂಪನಿಗಳು ಈ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳನ್ನು ಮರೆಮಾಚುತ್ತವೆ.

ಕ್ಲೀನಿಂಗ್ ಔಷಧಗಳು

ಬಾತರೂಮ್, ಶೌಚಾಲಯ, ಸಿಂಕ್, ನೆಲ.. ಹೀಗೆ ಸಾಮಾನ್ಯವಾಗಿ ಸ್ವಚ್ಛಗೊಳಿಸಲು ವಿವಿಧ ಕಂಪನಿಗಳ ಕೆಮಿಕಲ್ ಖರೀದಿಸಲಾಗುತ್ತದೆ. ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಈ ಕೆಮಿಕಲ್ ಗಳಲ್ಲಿ 2-ಬಿಇ (ದೇಹದ ಹಾರ್ಮೊನ್ ಗಳ ಮೇಲೆ ದುಷ್ಪರಿಣಾಮ ಬೀರುವ ಅಂಶ), ಅಮೋನಿಯಾ (ಕ್ಯಾನ್ಸರ್ ಕಾರಣ, ನರಗಳ ದುರ್ಬಲಗೊಳಿಸುವಿಕೆ) `ಪರ್ಪ್ಯೂಮ್’ ಬಳಸಲಾಗುತ್ತದೆ.

ಟೂತ್ ಪೇಸ್ಟ್

ದಿನ ಬಳಕೆಯ ಟೂತ್ ಪೇಸ್ಟ್ ಹಾಗೂ ಬಾಯಿ ಶುದ್ದಿಕರಿಸುವ ದ್ರವರೂಪದ ಉತ್ಪನ್ನಗಳಿಗೆ ಬಳಸುವ ರಾಸಾಯನಿಕಗಳು, ದವಡೆ, ಬಾಯಿಯ ಚರ್ಮ, ವಸಡು, ಚರ್ಮ ಹಾಗೂ ಹೊಟ್ಟೆಯ ಹಾರ್ಮೊನ್ ಗಳ ಮೇಲೆ ದುಷ್ಪರಿಣಾಮ ಬೀರುತ್ತವೆ.

ಸಾಮಾನ್ಯವಾಗಿ ಟೂತ್ ಪೇಸ್ಟ್ ಗೆ ಬಳಸುವ ಫ್ಲೌರೈಡ್ ನ್ಯೂರೊ ಟಾಕ್ಸಿಸ್ ಎಂದೇ ಹೆಸರುವಾಸಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಸರಕಾರಿ ಸಂಸ್ಥೆಗಳು ಹಾಗೂ ವೈದ್ಯರು ಇದು ಹಲ್ಲು ಶುಚಿಗೆ ಉತ್ತಮ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments