ಭಾರತದಲ್ಲಿ 2019ರ ನಂತರ ಮೊದಲ ಬಾರಿ ಹಕ್ಕಿಜ್ವರ ಪ್ರಕರಣ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ 4 ವರ್ಷದ ಮಗುವಿನಲ್ಲಿ ಹಕ್ಕಿಜ್ವರದ (ಎಚ್9ಎನ್2) ಸೋಂಕು ಪತ್ತೆಯಾಗಿದೆ. 2019ರ ನಂತರ ಭಾರತದಲ್ಲಿ ಪತ್ತೆಯಾದ ಎರಡನೇ ಪ್ರಕರಣ ಇದಾಗಿದೆ.
ಕಳೆದ ಫೆಬ್ರವರಿಯಲ್ಲಿ ಮಗುವಿಗೆ ತೀವ್ರ ಜ್ವರ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದು ಡಬ್ಲೂಎಚ್ ಒ ವಿವರಿಸಿದೆ.
ಮಗುವಿನ ಕುಟುಂಬದವರು ಕೋಳಿ ಫಾರಂ ನಡೆಸುತ್ತಿದ್ದು, ಇದರಿಂದ ಹಕ್ಕಿಜ್ವರ ಕಾಣಿಸಿಕೊಂಡಿದೆ. ಆದರೆ ಕೋಳಿ ಫಾರಂ ಸುತ್ತಮುತ್ತ ವಾಸಿಸುವ ಜನರಲ್ಲಿ ಈ ರೋಗ ಕಾಣಿಸಿಕೊಂಡಿಲ್ಲ. ಹಾಗಾಗಿ ಈ ರೋಗ ವ್ಯಾಪಿಸಿಲ್ಲ ಎಂದು ಡಬ್ಲ್ಯೂಎಚ್ ಒ ಹೇಳಿದೆ.