Friday, September 11, 2026
Google search engine
Homeಕ್ರೀಡೆWPL ಸೋಫಿ ಡಿವೈನ್‌ ಮ್ಯಾಜಿಕ್:‌ ಕೊನೆಯ ಓವರ್‌ ನಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್

WPL ಸೋಫಿ ಡಿವೈನ್‌ ಮ್ಯಾಜಿಕ್:‌ ಕೊನೆಯ ಓವರ್‌ ನಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್

ಮಧ್ಯಮ ವೇಗಿ ಸೋಫಿ ಡಿವೈನ್‌ ಕೊನೆಯ ಓವರ್‌ ನಲ್ಲಿ ಮಾಡಿದ ಬಿಗುವಿನ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ವನಿತೆಯರ ಪ್ರೀಮಿಯರ್‌ ಲೀಗ್‌ ಟಿ-20 ಪಂದ್ಯದಲ್ಲಿ 3 ರನ್‌ ಗಳಿಂದ ಗುಜರಾತ್‌ ಜೈಂಟ್ಸ್ ವಿರುದ್ಧ ಮುಗ್ಗರಿಸಿದೆ.

ವಡೋದರಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಜೈಂಟ್ಸ್‌ ೨೦ ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 174 ರನ್‌ ಸಂಪಾದಿಸಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ ಗೆ 171 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಕ್ಯಾಪಿಟಲ್ಸ್‌ ಕೊನೆಯ ಓವರ್‌ ನಲ್ಲಿ 8 ರನ್‌ ಗಳಿಸಬೇಕಿತ್ತು. ಈ ಹಂತದಲ್ಲಿ ದಾಳಿಗೆ ಬಂದ ಸೋಫಿ ಡಿವೈನ್‌ 5 ರನ್‌ ನೀಡಿ 2 ವಿಕೆಟ್‌ ಪಡೆದು ಸೋಲಿನ ದವಡೆಯಲ್ಲಿದ್ದ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಡೆಲ್ಲಿ ಕ್ಯಾಪಿಟಲ್ಸ್‌ 100 ರನ್‌ ಪೂರೈಸಿದಾಗ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ನಿಕಿ ಪ್ರಸಾದ್‌ (47) ಮತ್ತು ಸ್ನೇಹಾ ರಾಣಾ (29) 70 ರನ್‌ ಜೊತೆಯಾಟದಿಂದ ಗೆಲುವಿನ ಭರವಸೆ ಮೂಡಿಸಿದರು. ಆದರೆ ಡಿವೈನ್‌ ಕೊನೆಯ ಓವರ್‌ ನಲ್ಲಿ ಇವರಿಬ್ಬರ ವಿಕೆಟ್‌ ಪಡೆದು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಡಿವೈನ್‌ 4 ವಿಕೆಟ್‌ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಗುಜರಾತ್‌ ಜೈಂಟ್ಸ್‌ ಆರಂಭಿಕ ಆಟಗಾರ್ತಿ ಬೆತ್‌ ಮೂತಿ (58) ಅರ್ಧಶತಕದ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಅನುಷ್ಕಾ ಶರ್ಮ (39) ಮತ್ತು ಕೊನೆಯಲ್ಲಿ ತನುಕಾ (21) ಮಾತ್ರ ಸ್ವಲ್ಪ ಮಟ್ಟಿಗೆ ಪ್ರತಿರೋಧ ಒಡ್ಡಿ ಪೈಪೋಟಿಯ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments