ಕಾಶ್ಮೀರಕ್ಕೆ ಪ್ರಸಕ್ತ ವರ್ಷದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ 1.25 ದಶಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.
2024 ಅರ್ಧವರ್ಷ ಕೂಡ ಪೂರೈಸಿಲ್ಲ. ಆಗಲೇ 1.25 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಾಶ್ಮೀರಕ್ಕೆ ಭೇಟಿ ನೀಡಿದ ವರ್ಷದಲ್ಲೇ ಗರಿಷ್ಠ ಪ್ರಮಾಣದ ಪ್ರವಾಸಿಗರು ಇದೇ ಮೊದಲಾಗಿದೆ.
ಜೂನ್ ಆರಂಭಕ್ಕೂ ಮುನ್ನವೇ ಪ್ರವಾಸಿಗರಿಂದ ಈಗಾಗಲೇ ಶ್ರೀನಗರದ ಹೋಟೆಲ್, ಗುಲ್ಮಾರ್ಗ್ ನ ಸ್ಕೀ ಹೋಟೆಲ್, ಪಹಲ್ಗಾಮ್ ನ ಪರ್ವತಗಳ ನಡುವಿನ ಹೋಟೆಲ್ ಗಳು, ಸೋನಮಾರ್ಗ್ ಗಳಲ್ಲಿ ಹೋಟೆಲ್ ಗಳು ಭರ್ತಿಯಾಗಿವೆ.
ಸ್ಥಳೀಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ ಈಗಾಗಲೇ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.
ಕಾಶ್ಮೀರದ ವಿಶ್ವವಿಖ್ಯಾತ ದಾಲ್ ಮತ್ತು ನೀಗಮ್ ಕೆರೆಗಳ ಬೋಟ್ ಹೌಸ್, ಗೆಸ್ಟ್ ಹೌಸ್, ಹೋಂ ಸ್ಟೇ ಮುಂತಾದವುಗಳಿಗೆ ಭಾರೀ ಬೇಡಿಕೆ ಬಂದಿವೆ. ವಿದೇಶೀ ಪ್ರವಾಸಿಗರಿಂದ ನಾವು ವಿದೇಶೀ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದೇವೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಅಮರನಾಥ ಯಾತ್ರೆ ಆರಂಭಕ್ಕೂ ಮುನ್ನ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಕಾಶ್ಮೀರದ ಹಿಮಾಲಯ ಮಾರ್ಗವಾಗಿ ಅಮರನಾಥ ಯಾತ್ರೆ ನಡೆಯುವುದರಿಂದ ಪ್ರವಾಸಿಗರ ಭೇಟಿ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ. ಆದರೆ ಈ ಬಾರಿ ಅದನ್ನೂ ಮೀರಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಅಮರನಾಥ ಯಾತ್ರೆ ಜೂನ್ 29ರಿಂದ ಆರಂಭಗೊಳ್ಳಲಿದ್ದು, 52 ದಿನಗಳ ಕಾಲ ಪ್ರವಾಸಿಗರ ದರ್ಶನಕ್ಕೆ ತೆರೆಯಲಾಗುವುದು. ಆಗಸ್ಟ್ 19ರಂದು ಕೊನೆಗೊಳ್ಳಲಿದೆ.