ಗಂಟೆಗೆ 1000 ಕಿ.ಮೀ. ವೇಗದಲ್ಲಿ ಸಂಚರಿಸುವ ಹೈಪರ್ ಲೂಪ್ ಅಭಿವೃದ್ಧಿ!
ಚೆನ್ನೈ: ಗಂಟೆಗೆ ಸಾವಿರ ಕಿಮಿ ವೇಗದಲ್ಲಿ ಸಂಚರಿಸುವ ಹೈಪರ್‌ಲೋಪ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಐಐಟಿ ಮದ್ರಾಸ್ ಮಾಡುತ್ತಿದೆ. ಹೈಪರ್ಲೂಪ್ನ ವಾಣಿಜ್ಯ ಕಾರ್ಯಾಚರಣೆ ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸಲಾಗಿದೆ ಎಂದು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವೀಜಿನಾಥನ್ ಕಾಮಕೋಟಿ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತೀಯ ರೈಲ್ವೇಯ ಧನಸಹಾಯದೊಂದಿಗೆ ಪ್ರಾರಂಭವಾದ ಹೈಪರ್ಲೂಪ್ ತಂತ್ರಜ್ಞಾನ ಸಂಶೋಧನೆ ಈಗ ಒಂದು…
ಇಸ್ರೇಲ್ ಭೀಕರ ವಾಯುದಾಳಿ: ಗಾಜಾ ಭದ್ರತಾ ಮುಖ್ಯಸ್ಥ ಸೇರಿ 413 ಮಂದಿ ಸಾವು
ಕದನ ವಿರಾಮದ ನಂತರ ಗಾಜಾ ಮೇಲೆ ಇಸ್ರೇಲ್ ಸೇನೆ ನಡೆಸಿದ ಭಾರೀ ಪ್ರಮಾಣದ ವಾಯುದಾಳಿಯಲ್ಲಿ ಗಾಜಾ ಆಂತರಿಕ ಭದ್ರತಾ ಮುಖ್ಯಸ್ಥ ಸೇರಿ ೪೧೩ ಮಂದಿ ಅಸುನೀಗಿದ್ದಾರೆ. ಜನವರಿ 19ರಿಂದ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗಿತ್ತು. ಇದಾದ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್ ಭಾರೀ ಪ್ರಮಾಣದ ದಾಳಿ ನಡೆಸಿದೆ. ಇದರಿಂದ ಗಾಜಾದ…
ಐಸಿಸಿ ಜಾಗತಿಕ ಕಮಾಂಡರ್ ಹತ್ಯೆಗೈದ ಅಮೆರಿಕ ವಾಯುಪಡೆ!
ಇರಾಕ್ ಅಲ್ ಅನ್ಬರ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಐಸಿಸಿನ ಜಾಗತಿಕ ಎರಡನೇ ನಾಯಕ ಅಬು ಖಾದಿಜಿಹ್ ಹತ್ಯೆಯಾಗಿದ್ದಾನೆ. ಇರಾಕ್ ಗುಪ್ತಚರರು ನೀಡಿದ ಮಾಹಿತಿ ಆಧರಿಸಿ ಮಾರ್ಚ್ 13ರಂದು ತಡರಾತ್ರಿ ವಾಯು ದಾಳಿ ನಡೆಸಿದ ಅಮೆರಿಕ ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಎರಡನೇ ಕಮಾಂಡರ್ ಹತ್ಯೆ ಮಾಡಿದೆ. ಅಬು ಖಾದಿಜಿಹ್ ಜಾಗತಿಕ…
ರೈಲು ಹೈಜಾಕ್ ಮಾಡಿದ್ದ 27 ಬಂಡುಕೋರರ ಹತ್ಯೆಗೈದ ಪಾಕಿಸ್ತಾನ ಸೇನೆ; 150 ಒತ್ತೆಯಾಳುಗಳ ರಕ್ಷಣೆ!
ರೈಲು ಹೈಜಾಕ್ ಮಾಡಿದ್ದ 27 ಬಲೂಚಿಸ್ತಾನದ ಬಂಡುಕೋರರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಸೇನೆ 150 ಒತ್ತೆಯಾಳುಗಳನ್ನು ರಕ್ಷಿಸಿದೆ. ಪಾಕಿಸ್ತಾನ ಪೇಶಾವರಕ್ಕೆ ಹೊರಟ್ಟಿದ್ದ ಜಾಫರ್ ರೈಲನ್ನು ನಿನ್ನೆ ಅಪಹರಿಸಿದ್ದ ಬಂಡುಕೋರರು ಬಲೂಚಿಸ್ತಾನಕ್ಕೆ ಕೊಂಡೊಯ್ದಿದ್ದರು. ಮಂಗಳವಾರ ರಾತ್ರಿ ಪೂರ್ಣ ಪ್ರಮಾಣದ ಸೇನೆ ಬಳಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ 27 ಬಂಡುಕೋರರನ್ನು ಕೊಂದು 150 ಪ್ರಯಾಣಿಕರನ್ನು ರಕ್ಷಿಸಿದೆ. ಒತ್ತೆಯಾಳುಗಳಾಗಿ…
ಪಾಕಿಸ್ತಾನದ ರೈಲು ಹೈಜಾಕ್: 11 ಯೋಧರ ಹತ್ಯೆ, 180 ಪ್ರಯಾಣಿಕರ ಒತ್ತೆ!
ಇಸ್ಲಾಮಾಬಾದ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಿ ನೂರಾರು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರವಾಗಿ ಘೋಷಿಸುವಂತೆ ಆಗ್ರಹಿಸಿ ಬಲೂಚಿಸ್ತಾನ ಲಿಬರಲ್ ಆರ್ಮಿ [ಬಿಎಲ್ ಎ] ರೈಲನ್ನು ಹೈಜಾಕ್ ಮಾಡಿದ್ದು, ಪಾಕಿಸ್ತಾನ ಸೇನೆಯ 11 ಮಂದಿಯನ್ನು ಹತ್ಯೆಗೈಯ್ಯಲಾಗಿದ್ದು, 180ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದೆ….
ಆಮದು ಸುಂಕ ಇಳಿಸಲು ಒಪ್ಪಿಕೊಂಡಿಲ್ಲ: ಅಮೆರಿಕಕ್ಕೆ ಭಾರತ ತಿರುಗೇಟು
ಅಮೆರಿಕದ ವಸ್ತುಗಳ ಮೇಲಿನ ಆಮದು ಸುಂಕ ಇಳಿಸುವುದಾಗಿ ಒಪ್ಪಿಕೊಂಡಿಲ್ಲ ಎಂದು ಭಾರತ ಸ್ಪಷ್ಟನೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ವಸ್ತುಗಳ ಮೇಲೆ ಎಷ್ಟು ತೆರಿಗೆ ವಿಧಿಸಲಾಗುತ್ತದೆಯೋ ಅಷ್ಟೇ ಪ್ರಮಾಣದ…
108 ದೇಶಗಳಲ್ಲಿ 29,000 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಭಾರತೀಯರು!
108 ದೇಶಗಳಲ್ಲಿ 29 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಭಾರತೀಯ ತೆರಿಗೆ ಪಾವತಿದಾರರು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಸುಮಾರು 30,161 ತೆರಿಗೆ ಪಾವತಿದಾರರು ವಿದೇಶಗಳಲ್ಲಿ ಆಸ್ತಿ ಘೋಷಿಸಿಕೊಂಡಿದ್ದು, ಇದರ ಒಟ್ಟಾರೆ ಮೌಲ್ಯ 29 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಬ್ಯಾಂಕ್ ಖಾತೆ, ಷೇರು ಮಾರುಕಟ್ಟೆಯ ಡಿವಿಡೆಂಡ್…
14ನೇ ಮಗುವಿನ ತಂದೆಯಾದ ಇಲಾನ್ ಮಸ್ಕ್!
ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ 14ನೇ ಮಗುವಿನ ತಂದೆಯಾಗಿದ್ದಾರೆ. ಪತ್ನಿ ಶಿವೊನ್ ಜಿಲಿಸ್ 4ನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಲಾನ್ ಮಸ್ಕ್ ಈ ವಿಷಯವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ೧೪ನೇ ಮಗುವಿಗೆ ಸೆಲ್ಡಾನ್ ಲೈಕರ್ಗಸ್ ಎಂದು ನಾಮಕರಣ ಮಾಡಲಾಗಿದೆ. ಶಿವೊನ್ ಜಿಲಿಸ್ 2021ರ ನವೆಂಬರ್ನಲ್ಲಿ ಮೊದಲ ಬಾರಿಗೆ ಅವಳಿ ಮಕ್ಕಳಿಗೆ (ಹೆಸರು- ಸ್ಟ್ರೈಡರ್ ಮತ್ತು…
ನಿಗೂಢ ಕಾಯಿಲೆಗೆ 50 ಮಂದಿ ಬಲಿ, ಸೋಂಕು ಕಾಣಿಸಿಕೊಂಡ 48 ಗಂಟೆಯಲ್ಲಿ ಸಾವು!
ಆಫ್ರಿಕಾ ಖಂಡದ ಕಾಂಗೊದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಗೆ 50 ಮಂದಿ ಅಸುನೀಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೋಂಕು ಕಾಣಿಸಿಕೊಂಡ 48 ಗಂಟೆಗಳಲ್ಲಿ ಜನರು ಸಾಯುತ್ತಿರುವುದು ಚಿಂತೆಗೀಡು ಮಾಡಿದ್ದು, ಘಟನಾ ಸ್ಥಳಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಹಾಗೂ ಸ್ಥಳೀಯ ವೈದ್ಯರು ಬೀಡು ಬಿಟ್ಟಿದ್ದು ರೋಗ ಲಕ್ಷಣಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಜನವರಿ 21 ರಂದು…
ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯಿಂದ 2000 ಉದ್ಯೋಗಿಗಳನ್ನು ವಜಾಗೊಳಿಸಿದ ಅಮೆರಿಕ
ನ್ಯೂಯಾರ್ಕ್: ಇತರ ದೇಶಗಳಿಗೆ ಅಮೆರಿಕದ ನೆರವು ನಿಲ್ಲಿಸಿರುವ ಅಧ್ಯಕ್ಷ ಟ್ರಂಪ್, ಇದೀಗ, ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ (ಯುಎಸ್ ಏಡ್) ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಯುಎಸ್‌ಏಡ್ ವೆಬ್ ಸೈಟ್ ನಲ್ಲಿ 2,000 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಪ್ರಕಟಿಸಲಾಗಿದೆ. ಸಿಬ್ಬಂದಿಗೆ ಬಲವಂತದ ರಜೆ: ಇದರ ಜೊತೆಗೆ, ಪ್ರಪಂಚದಾದ್ಯಂತ ಇರುವ ಸಂಸ್ಥೆಯ ಕೆಲ ಉದ್ಯೋಗಿಗಳನ್ನು ಹೊರತುಪಡಿಸಿ, ಸಾವಿರಾರು ಸಿಬ್ಬಂದಿಗೆ ಬಲವಂತದ…