0
ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10.75 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅತೀ ದೊಡ್ಡ ಮೊತ್ತವನ್ನು ಬೌಲರ್ ನೀಡಿದೆ.
ಅಬುಧಾಬಿಯಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆ ಎರಡನೇ ದಿನವಾದ ಸೋಮವಾರ ಅತೀ ದೊಡ್ಡ ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಗೌರವಕ್ಕೆ ಭುವೇಶ್ವರ್ ಕುಮಾರ್ ಪಾತ್ರರಾದರು.
ಭುವನೇಶ್ವರ್ ಕುಮಾರ್ ಖರೀದಿಗೆ ಆರ್ ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಪ್ರಮುಖ ಬೌಲರ್ ಗಾಗಿ ಜಿದ್ದಾಜಿದ್ದು ಕುಂಡು ಬಂದಿದ್ದು ಕೊನೆಗೂ ಪ್ರಮುಖ ಬೌಲರ್ ಖರೀದಿಸುವಲ್ಲಿ ಆರ್ ಸಿಬಿ ಯಶಸ್ವಿಯಾಯಿತು.
ಮೊದಲ ದಿನ ಪ್ರಮುಖ ಆಟಗಾರರನ್ನು ಖರೀದಿಸದೇ ಅಚ್ಚರಿ ಮೂಡಿಸಿದ್ದ ಆರ್ ಸಿಬಿ ಇಂದು ಕೂಡ ಕೇವಲ 2 ಕೋಟಿಗೆ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಟ್ಟುಕೊಟ್ಟಿತು. ದುಬಾರಿ ಬೌಲರ್ ಎಂಬ ಹಣೆಪಟ್ಟಿ ಹೊಂದಿರುವ ಸ್ಪಿನ್ನರ್ ಕೃನಾಲ್ ಪಾಂಡ್ಯ ಅವರನ್ನು 5.75 ಕೋಟಿಗೆ ಖರೀದಿಸಿ ಅಚ್ಚರಿ ಮೂಡಿಸಿದೆ.