ಪ್ರಧಾನಿಯಾಗಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ರೈಲ್ವೆ ಇಲಾಖೆಯ ಸುಧಾರಣೆಗೆ ಮಹತ್ವ ನೀಡಲಾಗಿತ್ತು. ಅದರಲ್ಲೂ ಸುರಕ್ಷಾ ಸೇರಿದಂತೆ ಹಲವು ತಂತ್ರಜ್ಞಾನ ಬಳಸುವ ಮೂಲಕ ರೈಲ್ವೆ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿತ್ತು. ಇದರ ನಡುವೆಯೂ ರೈಲ್ವೆ ದುರಂತಗಳು ಮರುಕಳಿಸುತ್ತಿರುವುದು ದುರ್ದೈವ.
ಹೌದು ಮೋದಿ ಆಡಳಿತದಲ್ಲಿ ರೈಲ್ವೆ ಇಲಾಖೆಯಲ್ಲಿ ಸುಧಾರಣೆ ಹೊರತಾಗಿಯೂ ಸಂಭವಿಸಿದ 10 ಪ್ರಮುಖ ರೈಲು ದುರಂತಗಳ ವಿವರ ಇಲ್ಲಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ದೇಶದ ಅತ್ಯಂತ ಭೀಕರ ಎರಡನೇ ರೈಲು ದುರಂತವಾಗಿದೆ.
2012- ಜುಲೈ 10ರಂದು, ಗುವಾಹಟಿ-ಪುರಿ ಎಕ್ಸ್ ಪ್ರೆಸ್ ಮತ್ತು ಅವಧ್-ಅಸ್ಸಾಂ ಎಕ್ಸ್ ಪ್ರೆಸ್ 2 ರೈಲುಗಳ ನಡುವೆ ಅಸ್ಸಾಂನ ರಂಗಿಯಾ ಪಟ್ಟಣದ ಬಳಿ ಡಿಕ್ಕಿ ಹೊಡೆದಿದ್ದರಿಂದ 108 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
2014- ಏಪ್ರಿಲ್ 1ರಂದು ತಮಿಳುನಾಡಿನ ಚೆನ್ನೈ ಬೀಚ್ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲು ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ 9 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
2016- ನವೆಂಬರ್ 20ರಂದು, ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ಉತ್ತರ ಪ್ರದೇಶದ ಕಾನ್ಪುರ ಬಳಿ ಹಳಿತಪ್ಪಿದ್ದರಿಂದ 150 ಪ್ರಯಾಣಿಕರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತಗಳಲ್ಲಿ ಒಂದಾಗಿದೆ.
2016- ನವೆಂಬರ್ 20ರಂದು ಉತ್ತರ ಪ್ರದೇಶದ ಪುಖ್ರಾಯನ್‌ನಲ್ಲಿ ಇಂದೋರ್-ರಾಜೇಂದ್ರನಗರ ಎಕ್ಸ್ ಪ್ರೆಸ್ ನ 14 ಬೋಗಿಗಳು ಹಳಿತಪ್ಪಿದ್ದರಿಂದ 152 ಜನ ಅಸುನೀಗಿದ್ದರು.
2017- ಜನವರಿ 21 ರಂದು, ಆಂಧ್ರಪ್ರದೇಶದಲ್ಲಿ ಜಗದಲ್‌ಪುರ-ಭುವನೇಶ್ವರ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಕುನೇರು ನಿಲ್ದಾಣದ ಬಳಿ ಹಳಿ ತಪ್ಪಿದ್ದರಿಂದ 41 ಮಂದಿ ಸಾವಿಗೀಡಾದರೆ ಹಲವರು ಗಾಯಗೊಂಡಿದ್ದರು.
2017- ಆಗಸ್ಟ್ 19ರಂದು ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ಉತ್ತರ ಪ್ರದೇಶದ ಖತೌಲಿ ಬಳಿ ಹಳಿತಪ್ಪಿತು. ಇದರಿಂದ 23 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದರು. ಹಳಿ ತಪ್ಪಲು ನಿರ್ವಹಣೆ ನಿರ್ಲಕ್ಷ್ಯದಿಂದ ಹಳಿ ಮುರಿದಿದ್ದು ಕಾರಣ ಎಂಬುದು ತಿಳಿದು ಬಂದಿತ್ತು.
2020- ಅಕ್ಟೋಬರ್ 16ರಂದು ಮಹಾರಾಷ್ಟ್ರದ ಕರ್ಮದ್ ಬಳಿ ಹೈದರಾಬಾದ್-ಮುಂಬೈ ಸಿಎಸ್‌ಎಂಟಿ ಎಕ್ಸ್ ಪ್ರೆಸ್ ಮತ್ತು ಹಜೂರ್ ಸಾಹಿಬ್ ನಾಂದೇಡ್-ಮುಂಬೈ ಸಿಎಸ್‌ಎಂಟಿ ರಾಜಧಾನಿ ವಿಶೇಷ ರೈಲು ಡಿಕ್ಕಿ ಆಗಿದ್ದರಿಂದ 16 ಮಂದಿ ಮೃತಪಟ್ಟಿದ್ದರು.
2022- ಹಳಿ ತಪ್ಪಿದ ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ (2022): ಜನವರಿ 13, 2022 ರಂದು, ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್‌ನ 12 ಕೋಚ್‌ಗಳು ಪಶ್ಚಿಮ ಬಂಗಾಳದ ಅಲಿಪುರ್‌ದುವಾರ್‌ನಲ್ಲಿ ಹಳಿತಪ್ಪಿ 9 ಮಂದಿ ಸಾವನ್ನಪ್ಪಿದರು ಮತ್ತು 36 ಮಂದಿ ಗಾಯಗೊಂಡರು.
2023- ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸುಮಾರು 300 ಜನರು ಮೃತಪಟ್ಟಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2024- ಪಶ್ಚಿಮ ಬಂಗಾಳದ ಪ್ರೇಕ್ಷಣಿಯ ಸ್ಥಳವಾದ ಡಾರ್ಜಲಿಂಗ್ ನ ಜಲಪುರಿ ನಗರದ ರಂಗಪಾನಿ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.