14 ಬಾರಿ ಪ್ರಶಸ್ತಿ ಗೆದ್ದು ಆವೆ ಅಂಕಣದ ರಾಜ ಎಂದೇ ಖ್ಯಾತಿ ಪಡೆದಿದ್ದ ಸ್ಪೇನ್ ನ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುಂಡಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಾಜಿ ಚಾಂಪಿಯನ್ ರಾಫೆಲ್ ನಡಾಲ್ 3-6, 6-7, 3-6 ಸೆಟ್ ಗಳಿಂದ 4ನೇ ಶ್ರೇಯಾಂಕಿತ ಜರ್ಮನಿಯ ಅಲೆಗ್ಸಾಂಡರ್ ಜ್ವುರೆವ್ ವಿರುದ್ಧ ಸೋಲುಂಡರು.
ರಾಫೆಲ್ ನಡಾಲ್ ವೃತ್ತಿಜೀವನದಲ್ಲಿ ಮೂರನೇ ಬಾರಿ ಗ್ರ್ಯಾನ್ ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುಂಡಿದ್ದಾರೆ. ಗಾಯದ ನಂತರ ಚೇತರಿಸಿಕೊಂಡು ವೃತ್ತಿಪರ ಟೆನಿಸ್ ಗೆ ಮರಳಿದ್ದ ನಡಾಲ್ ಈ ಟೂರ್ನಿ ನಂತರ ಟೆನಿಸ್ ಗೆ ನಿವೃತ್ತಿ ಹೇಳುತ್ತಾರೆ ಎಂಬ ವದಂತಿ ಹರಡಿತ್ತು.