ಕನ್ನಡ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಕುರಿತ ತನಿಖೆ ರಚನೆಗೆಯ ಸಾಧಕ-ಬಾಧಕಗಳ ಕುರಿತು ವರದಿ ನೀಡುವಂತೆ 15 ದಿನದಲ್ಲಿ ಉತ್ತರ ನೀಡುವಂತೆ ನಾಗಲಕ್ಷ್ಮೀ ಚೌಧರಿ ನೇತೃತ್ವದ ಮಹಿಳಾ ಆಯೋಗಕ್ಕೆ ಗಡುವು ನೀಡಿದೆ.
ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರು ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮಹಿಳಾ ಆಯೋಗ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲಿ ಯಾಕೆ ಸಮಿತಿ ರಚಿಸಬೇಕು ಅಥವಾ ರಚಿಸಬಾರದು ಎಂಬುದಕ್ಕೆ ವಿವರವಾದ ವರದಿ ನೀಡುವಂತೆ ಸೂಚಿಸಿದೆ.
ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೊರಗೆ ಬಂದರೆ ಹಣ ಹೂಡಿಕೆ ಕುಸಿಯಲಿದೆ. ಇದರಿಂದ ಬೆಳವಣಿಗೆ ಆಗುತ್ತಿರುವ ಕನ್ನಡ ಚಿತ್ರರಂಗ ಮತ್ತೆ ತತ್ತರಿಸಲಿದೆ. ಇದರಿಂದ ಮುಂದೆ ಬರಲು ಜನ ಹಿಂದೆ ಮುಂದೆ ನೋಡುತ್ತಾರೆ ಎಂದು ಕೆಲವು ನಿರ್ಮಾಪಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ನಟಿಯರ ರಕ್ಷಣೆಗೆ ಸಮಿತಿ ಬೇಕು. ನಮ್ಮ ಮೇಲಿನ ದೌರ್ಜನ್ಯ ಹೇಳಿಕೊಳ್ಳಲು ಸೂಕ್ತ ವೇದಿಕೆ ಇಲ್ಲ ಎಂದು ಕೆಲವು ನಟಿಯರು ವಾದಿಸಿದರು. ಇದರಿಂದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಲಿಲಿಲ್ಲ.