Thursday, November 21, 2024
Google search engine
Homeಬೆಂಗಳೂರುಕೆರೆ, ರಸ್ತೆ ಬದಿಯಲ್ಲೇ ಪಿಒಪಿ ಗಣೇಶ ಮೂರ್ತಿ ಬಿಟ್ಟುಹೋದ ಸಾರ್ವಜನಿಕರು!

ಕೆರೆ, ರಸ್ತೆ ಬದಿಯಲ್ಲೇ ಪಿಒಪಿ ಗಣೇಶ ಮೂರ್ತಿ ಬಿಟ್ಟುಹೋದ ಸಾರ್ವಜನಿಕರು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಭ್ರಮ- ಸಡಗರದಿಂದ ಗಣೇಶೋತ್ಸವವನ್ನು ಆಚರಿಸಲಾಗಿದ್ದು, ಒಂದೇ ದಿನ  ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ 17 ಸಾವಿರ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿನ ಕೆರೆ, ಕಲ್ಯಾಣಿ, ಮೊಬೈಲ್ ಟ್ಯಾಂಕರ್ ಸೇರಿ ಹಲವೆಡೆ 2,17,006 ಗಣೇಶ ವಿಸರ್ಜನೆ ಮಾಡಲಾಗಿದೆ. ವಲಯವಾರು ಗಣಪನ ಮೂರ್ತಿಗಳ ವಿಸರ್ಜನೆ ಮಾಡಿರುವ ಬಗ್ಗೆ ಪಾಲಿಕೆ ಅಂಕಿ-ಅಂಶ ಬಿಡುಗಡೆಗೊಳಿಸಿದೆ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಗರಿಷ್ಠ 84 ಸಾವಿರ ಗಣೇಶ ವಿಸರ್ಜನೆ ಮಾಡಲಾಗಿದ್ದರೆ, ಎರಡನೇ ಸ್ಥಾನದಲ್ಲಿ ಪಶ್ಚಿಮ ವಲಯ ಇದ್ದು, 52,429 ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಪೂರ್ವ ವಲಯ- 40,791, ಪಶ್ಚಿಮ ವಲಯ- 52,429, ದಕ್ಷಿಣ ವಲಯ- 84,149, ಬೊಮ್ಮನಹಳ್ಳಿ ವಲಯ- 3,915 ದಾಸರಹಳ್ಳಿ ವಲಯ- 1,719, ಮಹದೇವಪುರ ವಲಯ- 7,229, ರಾಜರಾಜೇಶ್ವರಿ ನಗರ ವಲಯ- 12680, ಯಲಹಂಕ ವಲಯ- 14,094, ಒಟ್ಟು: 2,17,006.

ಗಣೇಶ ವಿಸರ್ಜನೆ ವೇಳೆ ಸಾಕಷ್ಟು ಪಿಒಪಿ ಗಣೇಶ ಮೂರ್ತಿಗಳು ಪತ್ತೆ ಆಗಿವೆ. ಪಿಒಪಿ ಗಣೇಶ ಮೂರ್ತಿಗಳನ್ನ ವಿಸರ್ಜನೆ ಮಾಡದೇ ಹಾಗೇಯೆ ಇಟ್ಟಿದ್ದು, ನಿನ್ನೆ ಒಂದೇ ದಿನ ಯಡಿಯೂರು ಕೆರೆ ಗೆ 200ಕ್ಕೂ ಹೆಚ್ಚು ಪಿಒಪಿ ಗಣೇಶ ಮೂರ್ತಿಗಳು ಬಂದಿದ್ದವು. ಇದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಹೆಬ್ಬಾಳ, ಸ್ಯಾಂಕಿ ಟ್ಯಾಂಕಿಯಲ್ಲಿ ಕೆರೆಗೆ ಸಾಕಷ್ಟು ಪಿಒಪಿ ಗಣೇಶ ಮೂರ್ತಿಗಳು ಬಂದಿದ್ದು ಮೊದಲು ಮಣ್ಣಿನ ಗಣೇಶ, ಪೇಪರ್ ಗಣೇಶನನ್ನ ವಿಸರ್ಜನೆ ಮಾಡಿ ನಂತರ ಪಿಒಪಿ ವಿಸರ್ಜನೆಗೆ ಚಿಂತನೆ ಮಾಡಲಾಗುತ್ತಿದೆ. ಪಿಒಪಿ ಪಿಒಪಿ ಗಣೇಶಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡಲು ಅವಕಾಶ ನೀಡದೇ ಇರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ಇದರಿಂದ ಕೆರೆ, ಕಲ್ಯಾಣಿಗಳು ಹಾಳಾಗುತ್ತವೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಮನವಿ ಮಾಡಿದ್ದರೂ ಸಾಕಷ್ಟು ಜನರು ಪಿಒಪಿ ಗಣೇಶ ಮೂರ್ತಿಗಳನ್ನು ಪೂಜೆ ಮಾಡಿ ತಂದಿದ್ದಾರೆ.

ಪಿಒಪಿ ಬಗ್ಗೆ ಜಾಗೃತಿ ಹೆಚ್ಚಾಗಬೇಕು. ಪೂಜೆ ಮಾಡಿ ಗಣೇಶ ಮೂರ್ತಿಗಳನ್ನ ಸಾಕಷ್ಟು ಇಟ್ಟು ಹೋಗಿದ್ದಾರೆ. ಹಬ್ಬ ಒಂದೇ ದಿನಕ್ಕೆ ಸೀಮಿತವಾಗಬಾರದು. ನಾವು ಗಣೇಶನ ಮೇಲೆ‌ ಹಾಕಿದ ಹೂವನ್ನ ಎಸೆಯುವುದಕ್ಕೂ ಹಿಂದೆ ಮುಂದೆ ನೋಡುತ್ತೇವೆ. ಹೀಗಿರುವಾಗ ಮೂರ್ತಿಗಳನ್ನ ರಸ್ತೆಯಲ್ಲಿ ಬಿಟ್ಟು ಹೋದರೆ ನೋಡುವುದಕ್ಕೆ ತುಂಬ ಬೇಜಾರು ಆಗುತ್ತೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments