ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಸೇರಿದಂತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ 20 ನಾಯಕರು ಮೋದಿ 3.0 ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದ್ದ ಸ್ಮೃತಿ ಇರಾನಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಸೋಲುಂಡರೆ, ವಿತ್ತ ಖಾತೆಯ ಸಹಾಯಕ ಸಚಿವರಾಗಿದ್ದ ಅನುರಾಗ್ ಠಾಕೂರ್ ಗೆಲುವು ಕಂಡಿದ್ದರೂ ಸಚಿವ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ದೂರವಾಣಿ ಮತ್ತು ಸಂಪರ್ಕ ಖಾತೆ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್, ಅಜಯ್ ಮಿಶ್ರಾ ಥೇಣಿ ಸೋಲುಂಡು ಸಚಿವ ಸ್ಥಾನ ವಂಚಿತರಾಗಿದ್ದಾರೆ.
ಸಚಿವ ಸ್ಥಾನ ವಂಚಿತರು
ಅಜಯ್ ಭಟ್ (ಚುನಾವಣೆಯಲ್ಲಿ ಗೆದ್ದರು)
2. ಸಾಧ್ವಿ ನಿರಂಜನ್ ಜ್ಯೋತಿ (ಚುನಾವಣೆಯಲ್ಲಿ ಸೋತರು)
3. ಮೀನಾಕ್ಷಿ ಲೇಖಿ (ಸ್ಪರ್ಧಿಸಲಿಲ್ಲ)
4. ರಾಜ್ಕುಮಾರ್ ರಂಜನ್ ಸಿಂಗ್
5. ಜನರಲ್ ವಿಕೆ ಸಿಂಗ್ (ನಿವೃತ್ತ) (ಸ್ಪರ್ಧಿಸಲಿಲ್ಲ)
6. ಆರ್ ಕೆ ಸಿಂಗ್ (ಚುನಾವಣೆಯಲ್ಲಿ ಸೋತರು)
7. ಅರ್ಜುನ್ ಮುಂಡಾ (ಚುನಾವಣೆಯಲ್ಲಿ ಸೋತರು)
8. ಸ್ಮೃತಿ ಇರಾನಿ (ಚುನಾವಣೆಯಲ್ಲಿ ಸೋತರು)
9. ಅನುರಾಗ್ ಠಾಕೂರ್ (ಚುನಾವಣೆಯಲ್ಲಿ ಗೆದ್ದರು)
10. ರಾಜೀವ್ ಚಂದ್ರಶೇಖರ್ (ಚುನಾವಣೆಯಲ್ಲಿ ಸೋತರು)
11. ನಿಸಿತ್ ಪ್ರಮಾಣಿಕ್ (ಚುನಾವಣೆಯಲ್ಲಿ ಸೋತರು)
12. ಅಜಯ್ ಮಿಶ್ರಾ ತೇನಿ (ಚುನಾವಣೆಯಲ್ಲಿ ಸೋತರು)
13. ಸುಭಾಸ್ ಸರ್ಕಾರ್ (ಚುನಾವಣೆಯಲ್ಲಿ ಸೋತರು)
14. ಜಾನ್ ಬಾರ್ಲಾ
15. ಭಾರತಿ ಪವಾರ್ (ಚುನಾವಣೆಯಲ್ಲಿ ಸೋತರು)
16. ಅಶ್ವಿನಿ ಕುಮಾರ್ ಚೌಬೆ (ಸ್ಪರ್ಧಿಸಲಿಲ್ಲ)
17. ರಾವ್ ಹೇಬ್ ದಾನ್ವೆ (ಚುನಾವಣೆಯಲ್ಲಿ ಸೋತರು)
18. ಕಪಿಲ್ ಪಾಟೀಲ್ (ಚುನಾವಣೆಯಲ್ಲಿ ಸೋತರು)
19. ನಾರಾಯಣ ರಾಣೆ (ಚುನಾವಣೆಯಲ್ಲಿ ಗೆದ್ದರು)
20. ಭಾಗವತ್ ಕರದ್