ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಗೆಲ್ಲುತ್ತಾ ಅಥವಾ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಾ ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಬಗ್ಗೆ ನಿಖರ ಅಭಿಪ್ರಾಯ ನೀಡುತ್ತಾ ಬಂದಿರುವ ಮಾರುಕಟ್ಟೆ ತಜ್ಞರು ಹೇಳುವುದೇ ಬೇರೆ.
ಹೌದು, ಮಾರುಕಟ್ಟೆ ತಜ್ಞರು ಅಥವಾ ಷೇರು ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಬಿಜೆಪಿ ನೇತೃತ್ವದ ಎನ್ ಡಿಎ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಪಡೆಯುವುದಿಲ್ಲ. ಬಿಜೆಪಿ ಹೇಳಿಕೊಂಡಂತೆ 400 ಸ್ಥಾನ ದೊರೆಯುವ ಅವಕಾಶ ಶೇ.20ರಷ್ಟು ಮಾತ್ರ ಇದೆ ಎಂದು ಹೇಳಿದೆ.
ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಶೇ.70ರಷ್ಟು ಇದೆ. ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಶೇ.10ರಷ್ಟು ಮಾತ್ರ ಇದೆ. ಆದರೆ ಎನ್ ಡಿಎ ಹೇಳಿಕೊಂಡಂತೆ 370ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಹೇಳಲಾಗಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ. ಆದರೆ 400 ಸ್ಥಾನ ಸಿಗುವುದಿಲ್ಲ. ಬದಲಿಗೆ 300ರಿಂದ 320 ಸ್ಥಾನ ಗೆಲ್ಲಬಹುದು. 2004ರ ಲೋಕಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ತಜ್ಞರು ಅನಿರೀಕ್ಷಿತ ಫಲಿತಾಂಶದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಯಂತೆ ಎನ್ ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂಬುದು ಮಾರುಕಟ್ಟೆ ವಿಶ್ಲೇಷಕರು ಬಯಸುತ್ತಿದ್ದಾರೆ. 2004ರ ಚುನಾವಣೆ ಫಲಿತಾಂಶ ದಿನ ಷೇರು ಮಾರುಕಟ್ಟೆ 15.5 ಅಂಕಗಳಷ್ಟು ಕುಸಿದಿತ್ತು. ಈ ಬಾರಿಯೂ ಅದೇ ಆಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.