ಒಂದು ತಿಂಗಳ ಅವಧಿಯಲ್ಲಿ 21 ನವಜಾತ ಶಿಶುಗಳು ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಜೂನ್ ಒಂದೇ ತಿಂಗಳಲ್ಲಿ 21 ನವಜಾತ ಶಿಶುಗಳು ಮೃತಪಟ್ಟಿರುವುದು ಈಗ ಭಾರೀ ಸುದ್ದಿ ಮಾಡಿದೆ. 15 ಶಿಶುಗಳು ಇದೇ ಆಸ್ಪತ್ರೆಯಲ್ಲಿ ಜನಿಸಿದ್ದರೆ, 6 ಶಿಶುಗಳು ಬೇರೆ ಆಸ್ಪತ್ರೆಯಿಂದ ಬಂದಿದ್ದವು.
ಮಕ್ಕಳು ಕಡಿಮೆ ತೂಕ ಇರುವುದು ಹಾಗೂ ಅವಧಿಗೂ ಮುನ್ನವೇ ಜನಿಸಿದ್ದು ಮಕ್ಕಳ ಸಾವಿಗೆ ಪ್ರಧಾನ ಕಾರಣ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮೃತಪಟ್ಟ 21 ಶಿಶುಗಳ ಪೈಕಿ 19 ಮಕ್ಕಳು ಅವಧಿಗೂ ಮುನ್ನ ಜನಿಸಿದ್ದರಿಂದ ಮೃತಪಟ್ಟರೆ, ಒಂದು ಮಗು ಅಳಲೇ ಇಲ್ಲ. ಮತ್ತೊಂದು ಸೋಂಕು ತಗುಲಿ ಮೃತಪಟ್ಟಿದೆ ಎಂದು ವೈದ್ಯರು ವಿವರಗಳನ್ನು ನೀಡಿದ್ದಾರೆ.
ಬಹುತೇಕ ಮಕ್ಕಳು ಆಸ್ಪತ್ರೆಗೆ ದಾಖಲಿಸಿದಾಗ ಆಗಲೇ ಸಮಯ ಮಿಂಚಿತ್ತು. ಅತ್ಯಂತ ಕಠಿಣ ಸಂದರ್ಭದಲ್ಲಿ ಮಕ್ಕಳನ್ನು ದಾಖಲಿಸಿದ್ಧಾರೆ. ಇದರಿಂದ ಚಿಕಿತ್ಸೆ ನೀಡಿದರೂ ಪ್ರಯೋಜನವಾಗುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.