ದಾಖಲೆಯ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತ ಸ್ಪೇನ್ ನ ರಾಫೆಲ್ ನಡಾಲ್ ವೃತ್ತಿಪರ ಟೆನಿಸ್ ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ.
ಸರ್ವಕಾಲಿಕ ಟೆನಿಸ್ ಆಟಗಾರರಲ್ಲಿ ಒಬ್ಬರಾಗಿರುವ ರಾಫೆಲ್ ನಡಾಲ್ ಗುರುವಾರ ಭಾವಾತ್ಮಾಕ ವೀಡಿಯೋ ಪೋಸ್ಟ್ ನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಡೇವಿಸ್ ಕಪ್ ಫೈನಲ್ ಪಂದ್ಯ ನಡಾಲ್ ಅವರ ವೃತ್ತಿಜೀವನದ ಕೊನೆಯ ಟೆನಿಸ್ ಪಂದ್ಯವಾಗಲಿದೆ. ನಡಾಲ್ ದಾಖಲೆಯ 14 ಬಾರಿ ಫ್ರೆಂಚ್ ಓಪನ್ ಸೇರಿದಂತೆ 22 ಗ್ರ್ಯಾನ್ ಸ್ಲಾಮ್ ಟೂರ್ನಿ ಗೆದ್ದ ದಾಖಲೆ ಹೊಂದಿದ್ದಾರೆ.
ನಾನು ವೃತ್ತಿಪರ ಟೆನಿಸ್ ಗೆ ನಿವೃತ್ತಿ ಹೇಳುತ್ತಿದ್ದೇನೆ. ಕಳೆದ ಕೆಲವು ವರ್ಷಗಳು ಅದರಲ್ಲೂ ಹಿಂದಿನ 2 ವರ್ಷಗಳು ಅತ್ಯಂತ ಕಠಿಣವಾಗಿದ್ದವು. ನಿವೃತ್ತಿ ನಿರ್ಧಾರ ಅತ್ಯಂತ ಕಠಿಣವಾಗಿದ್ದು, ಎಲ್ಲಾದಕ್ಕೂ ಆರಂಭ ಮತ್ತು ಕೊನೆ ಎಂಬುದು ಇದ್ದೇ ಇರುತ್ತದೆ ಎಂದು ನಡಾಲ್ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.