Friday, November 22, 2024
Google search engine
Homeತಾಜಾ ಸುದ್ದಿಆಫ್ಘಾನಿಸ್ತಾನದಲ್ಲಿ ಆಹಾರಕ್ಕಾಗಿ ಹಾಹಾಕಾರ: 5 ತಿಂಗಳಲ್ಲಿ ಹಸಿವಿನಿಂದ 26 ಮಕ್ಕಳು ಸಾವು

ಆಫ್ಘಾನಿಸ್ತಾನದಲ್ಲಿ ಆಹಾರಕ್ಕಾಗಿ ಹಾಹಾಕಾರ: 5 ತಿಂಗಳಲ್ಲಿ ಹಸಿವಿನಿಂದ 26 ಮಕ್ಕಳು ಸಾವು

ಅಪೌಷ್ಠಿಕತೆ ಮತ್ತು ಅಸಮರ್ಪಕ ಆಹಾರದ ಕಾರಣದಿಂದಾಗಿ 5 ತಿಂಗಳಲ್ಲಿ 26 ಮಕ್ಕಳು ಅಫ್ಘಾನಿಸ್ತಾನದ ಬಡಾಖಾನ್ ಪ್ರಾಂತ್ಯದಲ್ಲಿ ಮೃತಪಟ್ಟಿವೆ.

ಹಸಿವಿನ ಕಾರಣ 5 ವರ್ಷದೊಳಗಿನ ಸುಮಾರು 365 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ 26 ಮಕ್ಕಳು ಮೃತಪಟ್ಟಿವೆ ಎಂದು ಬಡಾಕ್ಷಣ್‌ ಆಸ್ಪತ್ರೆ ವೈದ್ಯ ಅಬ್ದುಲ್ ಮಲಿಕ್ ರೋಫಿ ತಿಳಿಸಿದ್ದಾರೆ.

ಕಳೆದ ಮಾರ್ಚ್ 20ರಿಂದ ಇಲ್ಲಿಯವರೆಗೆ ಒಟ್ಟು 2,696 ಮಕ್ಕಳನ್ನು ಆಸ್ಪತ್ರೆಗೆ ಕರೆತರಲಾಗಿದೆ. ವೈದ್ಯರು ಹೆಚ್ಚುತ್ತಿರುವ ಅಪೌಷ್ಟಿಕತೆ ಪ್ರಕರಣಗಳಿಗೆ ಅಂಶಗಳ ಸಂಯೋಜನೆ, ಪೌಷ್ಟಿಕಾಂಶದ ಆಹಾರದ ಕೊರತೆ, ಅಸಮರ್ಪಕ ಆರೋಗ್ಯ ಸೇವೆಗಳು, ಬಡತನ ಮತ್ತು ಬ ಆರೋಗ್ಯ ಸೌಲಭ್ಯಗಳು ಕೆಲವು ಪ್ರದೇಶಗಳಿಗಷ್ಟೇ ಸೀಮಿತ ಆಗಿರುವುದು ಕಾರಣ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ದೇಶದಲ್ಲಿ 5 ವರ್ಷದೊಳಗಿನ ಸುಮಾರು 2.9 ದಶಲಕ್ಷ ಮಕ್ಕಳು ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ. ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಮತ್ತು ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂಧು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments