ರಾಜ್ಯದ ತೆರಿಗೆ ಪಾಲು ನೀಡಿದೇ ತಾರತಮ್ಯ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನು ಮುಂದೆ 28 ಪೈಸೆ ಪ್ರಧಾನಿ ಎಂದು ಕರೆಯಬೇಕು ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡು ಸರ್ಕಾರ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದೆ. ಒಂದು ರೂಪಾಯಿ ತೆರಿಗೆ ಪಡೆದು ಕೇವಲ 28 ಪೈಸೆ ಪಾಲನ್ನು ನೀಡಲಾಗುತ್ತಿದೆ. ಆದರೆ ಕಡಿಮೆ ತೆರಿಗೆ ಪಾವತಿಸುತ್ತಿರುವ ಬಿಜೆಪಿ ಆಡಳಿತಾರೂಢ ರಾಜ್ಯಗಳಿಗೆ ಅತ್ಯಧಿಕ ತೆರಿಗೆ ಪಾಲು ನೀಡಲಾಗುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದರು.
ರಾಮನಾಥಪುರಂ ಮತ್ತು ಥಾನಿ ನಗರಗಳಲ್ಲಿ ಡಿಎಂಕೆ ಪಕ್ಷದಿಂದ ಚುನಾವಣಾ ರ್ಯಾಲಿ ವೇಳೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಪಾಲು ನೀಡದೇ ಅನ್ಯಾಯ ಮಾಡುತ್ತಿರುವುದು ಅಲ್ಲದೇ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಜಾರುವ ಮೂಲಕ ಶಿಕ್ಷಣ ಪದ್ಧತಿಯನ್ನು ಹಾಳು ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಕೋಮು ಭಾವನೆ ತುಂಬುತ್ತಿದ್ದಾರೆ ಎಂದು ಆರೋಪಿಸಿದರು.