ಭಾರತ ಬೌಲರ್ ಗಳ ಸಂಘಟಿತ ದಾಳಿ ನೆರವಿನಿಂದ ನ್ಯೂಜಿಲೆಂಡ್ ತಂಡ ಎರಡನೇ ಇನಿಂಗ್ಸ್ ನಲ್ಲಿ 255 ರನ್ ಗಳಿಗೆ ಆಲೌಟಾಗಿದೆ. ಇದರಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು 359 ರನ್ ಗಳ ಗುರಿ ಪಡೆದಿದೆ.
ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ 5 ವಿಕೆಟ್ ಗೆ 198 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ 255 ರನ್ ಗೆ ಪತನಗೊಂಡಿತು. ಮೊದಲ ಇನಿಂಗ್ಸ್ ನಲ್ಲಿ 103 ರನ್ ಗಳ ಹಿನ್ನಡೆ ಅನುಭವಿಸಿದ್ದ ಭಾರತ ಈ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ 359 ರನ್ ಸವಾಲು ಮೆಟ್ಟಿ ನಿಲ್ಲಬೇಕಿದೆ.
ಶನಿವಾರ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ 5 ವಿಕೆಟ್ ಹಂಚಿಕೊಳ್ಳುವ ಮೂಲಕ ಕಿವೀಸ್ ಆಟಕ್ಕೆ ಅಂತ್ಯ ಹಾಡಿದರು. ವಾಷಿಂಗ್ಟನ್ ಸುಂದರ್ 4 ವಿಕೆಟ್ ಪಡೆದು ಅಗ್ರ ಕ್ರಮಾಂಕವನ್ನು ಕಟ್ಟಿ ಹಾಕಿದ್ದರು.
ನಿನ್ನೆ ವಿಕೆಟ್ ಕಾಯ್ದುಕೊಂಡಿದ್ದ ಟಾಮ್ ಬ್ಲಂಡೇಲ್ 41 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 48 ರನ್ ಗಳಿಸಿ ಔಟಾಗುತ್ತಿದ್ದಂತೆ ನ್ಯೂಜಿಲೆಂಡ್ ನಾಟಕೀಯ ಕುಸಿತ ಅನುಭವಿಸಿತು.