ಜೀತದಾಳುಗಳಾಗಿದ್ದ 33 ಭಾರತೀಯ ರೈತ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಇಟಲಿ ಎಂದು ಪೊಲೀಸರು ಹೇಳಿದ್ದಾರೆ.
ವೆರೊನಾ ನಗರದಲ್ಲಿ ಇಬ್ಬರು ಜಮೀನುದಾರರ ಬಳಿ 33 ಭಾರತೀಯರು ರೈತ ಕಾರ್ಮಿಕರಾಗಿ ಜೀತದಾಳುಂತೆ ಇದ್ದರು. ಇವರನ್ನು ಬಿಡುಗಡೆ ಮಾಡಿದ್ದು, ಜಮೀನುದಾರರು 545,300 ಡಾಲರ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಂತ್ರಕ್ಕೆ ಕೈ ಸಿಲುಕಿ ಹಣ್ಣು ಹೆಕ್ಕುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಭಾರತೀಯರನ್ನು ಜೀತದಿಂದ ಬಿಡುಗಡೆ ಮಾಡಲಾಗಿದೆ.
ಮಾಸಿಕ 17 ಸಾವಿರ ಯುರೋ ನೀಡುತ್ತಾರೆ. ನಿಮ್ಮ ಭವಿಷ್ಯ ಚೆನ್ನಾಗಿರುತ್ತದೆ ಎಂದು ನಂಬಿಸಿ ಇಟಲಿ ಜಮೀನುಗಳಲ್ಲಿ ಕೆಲಸ ಮಾಡಲು ಜನರನ್ನು ಸಾಗಿಸುವ ಗ್ಯಾಂಗ್ ಈ ಕೆಲಸ ಮಾಡುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.