ಭಾರತೀಯ ನೌಕಾಪಡೆಯು ಭರ್ಜರಿ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿ 17 ಮಂದಿಯನ್ನು ರಕ್ಷಿಸಿದೆ. 36 ಕಡಲ್ಗಳ್ಳರು ಶರಣಾದ ಘಟನೆ ಕೋಲ್ಕತಾ ಕಡಲತೀರದಲ್ಲಿ ನಡೆದಿದೆ.
ಶನಿವಾರ ಕಡಲ್ಗಳ್ಳರ ವಿರುದ್ಧ ಸುದೀರ್ಘ 40 ಗಂಟೆಗಳ ಕಾರ್ಯಾಚರಣೆ ನಡೆಸಿದ ನೌಕಾಪಡೆಯ ಐಎನ್ ಎಸ್ ಕೋಲ್ಕತಾ ಯುದ್ಧ ನೌಕೆ ಯಾವುದೇ ಹಾನಿ ಆಗದಂತೆ ಹಡಗನ್ನು ರಕ್ಷಿಸಿದ್ದೂ ಅಲ್ಲದೇ ಅದರಲ್ಲಿದ್ದ 17 ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತಂದಿದೆ.
ಭಾರತೀಯ ಕಡಲತೀರದಿಂದ ಸುಮಾರು 2600 ಕಿ.ಮೀ. ದೂರದಲ್ಲಿ ಸರಕು ಸಾಗಾಣೆ ಹಡಗಿನ ಮೇಲೆ ಕಡಲ್ಗಳ್ಳರು ದಾಳಿ ನಡೆಸಿರುವ ಮಾಹಿತಿ ಪಡೆದ ಭಾರತೀಯ ನೌಕಾಪಡೆ ಕಾರ್ಯಾಚರಣೆ ಆರಂಭಿಸಿತ್ತು. ಐಎನ್ ಎಸ್ ಕೋಲ್ಕತಾ ಯುದ್ಧ ನೌಕೆ ಜೊತೆ ಸಿ-17 ಯುದ್ಧದಲ್ಲಿ ಬಳಸಲಾಗುವ ಹೆಲಿಕಾಫ್ಟರ್ ಕಡಲ್ಗಳ್ಳರ ಪಾಲಾಗುತ್ತಿದ್ದ ಹಡಗನ್ನು ರಕ್ಷಿಸಿದ್ದಾರೆ. ಅಲ್ಲದೇ ಕಡಲ್ಗಳ್ಳರ ಬಳಿಯಿದ್ದ ದೋಣಿಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.