ಹವಾನಿಯಂತ್ರಿತ ನಗರಿ ಎಂದೇ ಹೆಸರಾಗಿದ್ದ ಬೆಂಗಳೂರು ಇದೀಗ ಬೆಂದ ನಗರಿ ಆಗುತ್ತಿದೆ. ಬಿಸಿಲಿನ ಝಳಕ್ಕೆ ಜನರು ತತ್ತರಿಸುತ್ತಿದ್ದು, ಮಾರ್ಚ್ ತಿಂಗಳ ಬಿಸಿಲು ಕಳೆದ 5 ವರ್ಷಗಳಲ್ಲೇ ಗರಿಷ್ಠ ಎಂದು ದಾಖಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಕನಿಷ್ಠ ಉಷ್ಣಾಂಶ 2.4 ಡಿಗ್ರಿ ಸೆಲ್ಸಿಯಸ್ ಆಗಿದೆ. ಇದು ಮಾರ್ಚ್ ತಿಂಗಳ ಉಷ್ಣಾಂಶದಲ್ಲಿ ಕಳೆದ 5 ವರ್ಷದಲ್ಲೇ ಗರಿಷ್ಠ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದೀಗ ಅದೇ ಬಿಸಿ ಇಡೀ ಮಾರ್ಚ್ ತಿಂಗಳಲ್ಲಿ ಆವರಿಸಿದೆ. ಏಪ್ರಿಲ್ ನಲ್ಲಿ ಈ ಧಗೆ ಇನ್ನಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.
ಮಾರ್ಚ್ 27, 2017ರಂದು 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. 2017ರಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ವಿವರ ನೀಡಿದೆ.