ತೆರಿಗೆ ಹೆಚ್ಚಳ ಖಂಡಿಸಿ ಕೀನ್ಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಮೃತಪಟ್ಟವರ ಸಂಖ್ಯೆ 39ಕ್ಕೇರಿದ್ದು, 360 ಮಂದಿ ಗಾಯಗೊಂಡಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೀನ್ಯಾ ಸರ್ಕಾರ ತೆರಿಗೆ ಹೆಚ್ಚಳ ಮಾಡಿತ್ತು. ಇದನ್ನು ಖಂಡಿಸಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗುತ್ತಿದ್ದು, ಇತ್ತೀಚೆಗಷ್ಟೇ ಸಂಸತ್ ಭವನಕ್ಕೆ ಬೆಂಕಿ ಹಾಕಲಾಗಿತ್ತು.
ದೇಶಾದ್ಯಂತ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದರೂ ಸರ್ಕಾರ ತೆರಿಗೆ ಹೆಚ್ಛಳ ಆದೇಶ ವಾಪಸ್ ಪಡೆಯಲು ನಿರಾಕರಿಸಿದೆ. ಇದರಿಂದ ಪ್ರತಿಭಟನಾಕಾರರು ಮುಂದಿನ ವಾರದಿಂದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.
ಕೀನ್ಯಾದ ಮಾನವ ಹಕ್ಕುಗಳ ವೇದಿಕೆ ಮೃತಪಟ್ಟವರ ವಿವರಗಳನ್ನು ಪ್ರಕಟಿಸಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ದುಪ್ಪಟ್ಟು ಸಂಖ್ಯೆಯ ನಾಗರಿಕರು ಮೃತಪಟ್ಟಿದ್ದಾರೆ.
ಜೂನ್ 18ರಿಂದ ಜುಲೈ 1ರ ನಡುವೆ ಕೀನ್ಯಾದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ 39 ಪ್ರತಿಭಟನಾಕಾರರು ಮೃತಪಟ್ಟಿದ್ದು, 361 ಮಂದಿ ಅಸುನೀಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.