ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಮೂರನೇ ಹಂತದ ಮತದಾನ ಮಂಗಳವಾರ ಮುಕ್ತಾಯಗೊಂಡಿದ್ದು, ಶೇಕಡಾ 65.58ರಷ್ಟು ಮತದಾನ ದಾಖಲಾಗುವ ಮೂಲಕ ದಾಖಲೆ ಮತದಾನವಾಗಿದೆ.
ಕೇಂದ್ರ ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಮೊದಲ ಹಂತದಲ್ಲಿ ಶೇ.61.38 ಮತ್ತು ಎರಡನೇ ಹಂತದ ಮತದಾನದಲ್ಲಿ 57.31ರಷ್ಟು ಮತದಾನವಾಗಿದೆ. ಇದರಿಂದ ವಿಶೇಷ ಪರಮಾಧಿಕಾರ 370ನೇ ವಿಧಿ ರದ್ದಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನ ದಾಖಲಾಗಿದೆ.
ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಇದರಿಂದ ಸುಮಾರು 10 ವರ್ಷಗಳ ನಂತರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.
ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅನಾಹುತ ನಡೆದಿಲ್ಲ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.12.97ರಷ್ಟು ಹೆಚ್ಚು ಮತದಾನವಾಗಿದೆ.