ಭಾರತೀಯ ಬಾಹ್ಯಕಾಶ ಸಂಸ್ಥೆಯ ಪುಷ್ಪಕ್ ವಿಮಾನ ವಾಣಿಜ್ಯ ಬಳಕೆಯ ವಿಮಾನಗಳಿಗಿಂತ ಅತ್ಯಂತ ವೇಗವಾಗಿ ಲ್ಯಾಂಡ್ ಮಾಡಿದೆ.
ಹವಾಮಾನ ವೈಪರಿತ್ಯದಿಂದ ಮೂರು ಬಾರಿ ಮುಂದೂಡಿಕೆ ಆಗಿದ್ದ ಪುಷ್ಪಕ್ ವಿಮಾನ ಲ್ಯಾಂಡಿಂಗ್ ಪ್ರಯೋಗ ಸೋಮವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ ಚಿನೊಕ್ ಹೆಲಿಕಾಫ್ಟರ್ ಮೂಲಕ ಪುಷ್ಪಕ್ ವಿಮಾನವನ್ನು ಕೆಳಗಿಳಿಸಲಾಯಿತು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂರನೇ ಬಾರಿಗೆ ತನ್ನ ಅಭಿವೃದ್ಧಿ ಪಡಿಸಲಾದ ಪುನರ್ಬಳಕೆಯ ಉಡಾವಣಾ ವಾಹನ ಪುಷ್ಪಕ್ ಪ್ರಯೋಗವನ್ನು 4.5 ಕಿ.ಮೀ. ಎತ್ತದಿಂದ ಇಳಿಸುವ ಪ್ರಯೋಗ ಯಶಸ್ವಿಯಾಗಿದೆ.
ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆ 10 ನಿಮಿಷಕ್ಕೆ ಪರೀಕ್ಷೆ ನಡೆಸಲಾಯಿತು.
ಈ ಮಿಷನ್ RLV LEX-01 ಮತ್ತು LEX-02 ನ ಸಾಧನೆಗಳನ್ನು ಅನುಸರಿಸಿ, RLV ಲ್ಯಾಂಡಿಂಗ್ ಪ್ರಯೋಗಗಳ ಸರಣಿಯಲ್ಲಿ ಇಸ್ರೋದ ಮೂರನೇ ಸತತ ಯಶಸ್ಸನ್ನು ಗುರುತಿಸುತ್ತದೆ.