ಒಡಿಶಾದ ಮುಖ್ಯಮಂತ್ರಿ ಸ್ಥಾನಕ್ಕೆ 4 ಬಾರಿಯ ಶಾಸಕ ಹಾಗೂ ಆದಿವಾಸಿ ಮೋಹನ್ ಮಹಾಜಿ ಆಯ್ಕೆಯಾಗಿದ್ದಾರೆ.
ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್ ನೇತೃತ್ವದಲ್ಲಿ ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೋಹನ್ ಮಹಾಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಪಡೆದಿರುವ ಬಿಜೆಪಿ ಎರಡು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಿದ್ದು, ಕೆವಿ ಸಿಂಗ್ ಡಿಯೊ ಮತ್ತು ಪ್ರವತಿ ಪರಿಡಾ ಅವರನ್ನು ಡಿಸಿಎಂಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಕಿಯೊಂಜರ್ ಕ್ಷೇತ್ರದಿಂದ ನಾಲ್ಕು ಬಾರಿಯ ಶಾಸಕ 52 ವರ್ಷದ ಮೋಹನ್ ಮಹಾಜಿ ಪರ ಬಿಜೆಪಿ ಕಾರ್ಯಕರ್ತರು ಒಲವು ತೋರಿದ್ದರು. ಅಲ್ಲದೇ ಸಿಎಂ ಸ್ಥಾನಕ್ಕೆ ಅತ್ಯಂತ ಫೇವರಿಟ್ ಆಗಿದ್ದರು.