ಪ್ರಬಲ ದಾನಾ ಚಂಡಮಾರುತ ಗುರುವಾರ ತಡರಾತ್ರಿ ಅಪ್ಪಳಿಸಿದ್ದು, ಸುಮಾರು 110 ಕಿ.ಮೀ. ವೇಗದಲ್ಲಿ ಪ್ರಬಲ ಗಾಳಿ ಮಳೆ ಬೀಸುತ್ತಿದೆ.
ಕೇಂದ್ರಪಾರ ಜಿಲ್ಲೆಯ ಭಿತ್ತರ್ ಕಾನಿಕಾ ಮತ್ತು ಭಾದ್ರಕ್ ಜಿಲ್ಲೆಯ ಧರ್ಮಾ ಗ್ರಾಮದ ನಡುವೆ ಚಂಡಮಾರುತ ಅಪ್ಪಳಿಸಿದ್ದು, ಸುಮಾರು 2 ಗಂಟೆಗಳ ಕಾಲ ಅಬ್ಬರಿಸಿ ಬೊಬ್ಬಿರಿದಿದೆ.
ಚಂಡಮಾರುತಕ್ಕೆ ದಾನಾ ಎಂಬ ಹೆಸರನ್ನು ಕತಾರ್ ಇಟ್ಟಿದೆ. ಶುಕ್ರವಾರ ಮಧ್ಯಾಹ್ನದ ನಂತರ ಚಂಡಮಾರುತದ ಅಬ್ಬರ ಕಡಿಮೆಯಾಗುವ ನಿರೀಕ್ಷೆ ಇದೆ.
ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಸುಮಾರು 110 ಜಿಲ್ಲೆಗಳ 10 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಸುಮಾರು 400 ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ವಿಮಾನ ಹಾಗೂ ಬಸ್ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.