ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಗೆ ಲೋಕಸಭೆಯ ಉಭಯ ಸದನಗಳಲ್ಲಿ ಧ್ವನಿಮತದ ಮೂಲಕ ಅನುಮೋದನೆ ಪಡೆಯಿತು.
ಜುಲೈ 23ರಂದು ನಿರ್ಮಲಾ ಸೀತರಾಮನ್ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದರು. ಇದೇ ವೇಳೆ ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಿದ್ದರು.
ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಬಜೆಟ್ ಗೆ ಅನುಮೋದನೆ ಪಡೆಯಲಾಯಿತು. ನಂತರ ರಾಜ್ಯಸಭೆಯಲ್ಲೂ ಬಜೆಟ್ ಗೆ ಅನುಮೋದನೆ ದೊರೆಯಿತು.
ಬಜೆಟ್ ಅಧಿವೇಶನದಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗಿದ್ದು, ಮಂಗಳವಾರ ದೇಶವೇ ಬೆಚ್ಚಿಬಿದ್ದ ಕೇರಳದ ವಯನಾಡು ಭೂಕುಸಿತ ದುರಂತ, ಜಾತಿ ಸಮೀಕ್ಷೆ, ಜಾರ್ಖಂಡ್ ರೈಲು ದುರಂತ, ದೆಹಲಿಯ ಅಕ್ರಮ ಕೋಚಿಂಗ್ ಕೇಂದ್ರಗಳ ಕುರಿತು ಚರ್ಚೆ ನಡೆಯಿತು.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಜೆಟ್ ಹಲ್ವಾ ಬಗ್ಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ಹಲ್ವಾ ಕಾರ್ಯಕ್ರಮ ಕೇವಲ ಸಾಂಪ್ರದಾಯಿಕ ಕಾರ್ಯಕ್ರಮವಾಗಿ ಆಚರಿಸಲಾಗುತ್ತ ಬರಲಾಗಿದೆ. ಆದರೆ ಈಗ ಅದಕ್ಕೆ ಜಾತಿ ಬಣ್ಣ ನೀಡಿರುವುದಕ್ಕೆ ಬೇಸರವಾಗಿದೆ. ಈ ಹಿಂದೆ ಕಾಂಗ್ರೆಸ್ ಬಜೆಟ್ ಹಲ್ವಾ ತಯಾರಿಸುವಾಗ ಸಚಿವರನ್ನು ರಾಹುಲ್ ಗಾಂಧಿ ಯಾಕೆ ಪ್ರಶ್ನಿಸಲಿಲ್ಲ ಎಂದು ಪ್ರಶ್ನಿಸಿದರು.