ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬೋರೇಟರಿಸ್ ಸಂಸ್ಥೆಯ ಉತ್ಪಾದಿಸುವ ಕ್ಯಾಲ್ಶಿಯಂ 500, ವಿಟಮಿನ್ ಡಿ3 ಸೇರಿದಂತೆ 49 ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ ಸಿಒ) ವರದಿ ಹೇಳಿದೆ.
ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ ಗುಣಮಟ್ಟ ಪರೀಕ್ಷೆಯ ವರದಿ ಬಿಡುಗಡೆ ಮಾಡಿದ ವರದಿಯಲ್ಲಿ ಸುಮಾರು 3000 ಮಾದರಿಯ ಔಷಧಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, 49 ಮಾದರಿಯ ಔಷಧಗಳು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ ಎಂದು ಹೇಳಿದೆ.
ಔಷಧ ತಯಾರಿಯಕೆಯ ನಾಲ್ಕು ಕಂಪನಿಗಳು ಪತ್ತೆ ಹಚ್ಚಲಾಗಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಪರೀಕ್ಷೆಗೊಳಪಡಿಸಿದ ಔಷಧಗಳ ಪೈಕಿ ಶೇ.1ರಷ್ಟು ಮಾತ್ರ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ. ದೇಶದಲ್ಲಿ ಕಳಪೆ ಗುಣಮಟ್ಟದ ಔಷಧಗಳನ್ನು ನಿಯಂತ್ರಿಸಲು ತಿಂಗಳಿಗೊಮ್ಮೆ ಔಷಧಗಳ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಿಡಿಎಸ್ ಸಿಒ ಮುಖ್ಯಸ್ಥ ರಾಜೀವ್ ಸಿಂಗ್ ರಘುವಂಶಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಆಂಟಿಬಯೋಟಿಕ್ಸ್‌ನ ಮೆಟ್ರೋನಿಡಜೋಲ್ ಮಾತ್ರೆಗಳು, ರೈನ್‌ಬೋ ಲೈಫ್ ಸೈನ್ಸಸ್‌ನ ಡೊಂಪೆರಿಡೋನ್ ಮಾತ್ರೆಗಳು ಮತ್ತು ಪುಷ್ಕರ್ ಫಾರ್ಮಾದಿಂದ ಆಕ್ಸಿಟೋಸಿನ್ ಚುಚ್ಚುಮದ್ದುಗಳನ್ನು ಫ್ಲ್ಯಾಗ್ ಮಾಡಿದ ಕೆಲವು ಉತ್ಪನ್ನಗಳಲ್ಲಿ ಸೇರಿದೆ.
ಸ್ವಿಸ್ ಬಯೋಟೆಕ್ ಪೇರೆಂಟರೆಲ್ಸ್‌ನ ಮೆಟ್‌ಫಾರ್ಮಿನ್, ಕ್ಯಾಲ್ಸಿಯಂ 500 ಮಿಗ್ರಾಂ, ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬೋರೇಟರೀಸ್‌ನಿಂದ ವಿಟಮಿನ್ ಡಿ3 250 ಐಯು ಮಾತ್ರೆಗಳು ಮತ್ತು ಆಲ್ಕೆಮ್ ಲ್ಯಾಬ್ಸ್‌ನಿಂದ ಪ್ಯಾನ್ 40. ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಉತ್ಪಾದಿಸಿದ ಪ್ಯಾರಸಿಟಮಾಲ್, ಗಾಜ್ ರೋಲ್ ನಾನ್-ಸ್ಟೆರೈಲ್ ರೋಲರ್ ಬ್ಯಾಂಡೇಜ್ ಮತ್ತು ಡಿಕ್ಲೋಫೆನಾಕ್ ಸೋಡಿಯಂ ಮಾತ್ರೆಗಳು ಕಳಪೆ ಗುಣಮಟ್ಟದ್ದಾಗಿದೆ.