Friday, November 22, 2024
Google search engine
Homeಕ್ರೀಡೆ5ನೇ ಬಾರಿ ಫೈನಲ್ ಗೆ ಲಗ್ಗೆ: ಏಷ್ಯಾಕಪ್ ನಲ್ಲಿ ಹಲವು ದಾಖಲೆ ಬರೆದ ಭಾರತ ವನಿತೆಯರು!

5ನೇ ಬಾರಿ ಫೈನಲ್ ಗೆ ಲಗ್ಗೆ: ಏಷ್ಯಾಕಪ್ ನಲ್ಲಿ ಹಲವು ದಾಖಲೆ ಬರೆದ ಭಾರತ ವನಿತೆಯರು!

ಬಾಂಗ್ಲಾದೇಶ ತಂಡವನ್ನು 10 ವಿಕೆಟ್ ಗಳಿಂದ ಸೋಲಿಸಿದ ಭಾರತ ವನಿತೆಯರ ತಂಡ ಏಷ್ಯಾಕಪ್ ಟಿ-20 ಟೂರ್ನಿಯ ಎಲ್ಲಾ 5 ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

ಶುಕ್ರವಾರ ನಡೆದ ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡವನ್ನು 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 80 ರನ್ ಗಳಿಗೆ ನಿಯಂತ್ರಿಸಿದ ಭಾರತ ತಂಡ 11 ಓವರ್ ಗಳಲ್ಲಿ ವಿಕೆಟ್ ಕಳೆದುಕೊಳ್ಳದೇ ಜಯಭೇರಿ ಬಾರಿಸಿತು.

ಭಾರತದ ಪರ ಸ್ಮೃತಿ ಮಂದಾನ 39 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 55 ರನ್ ಬಾರಿಸಿ ಔಟಾಗದೇ ಉಳಿದರೆ, ಶೆಫಾಲಿ ವರ್ಮಾ 28 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ ಔಟಾಗದೇ 26 ರನ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ರೇಣುಕಾ ಸಿಂಗ್ (10/3) ಮತ್ತು ರಾಧಾ ಯಾದವ್ (14/3) ಮಾರಕ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು. ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನಾ (32) ಏಕಾಂಗಿಯಾಗಿ ಹೋರಾಟ ನಡೆಸಿದರು.

ಭಾರತ ಈ ಗೆಲುವಿನೊಂದಿಗೆ ಏಷ್ಯಾಕಪ್ ಟಿ-20 ಟೂರ್ನಿಯ ಎಲ್ಲಾ ಆವೃತ್ತಿಗಳಲ್ಲೂ ಫೈನಲ್ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾರತ 2012, 2016 ಮತ್ತು 2022ರಲ್ಲಿ ಮೂರು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದಿದ್ದು, 4ನೇ ಬಾರಿಯ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ.

ಭಾರತ ಈ ಬಾರಿಯ ಏಷ್ಯಾಕಪ್ ನಲ್ಲಿ ಪಾಕಿಸ್ತಾನ, ಶ್ರೀಲಂಕಾ ಸೇರಿ 3 ಬಾರಿ 10 ವಿಕೆಟ್ ಗಳ ಅಂತರದಿಂದ ಜಯ ದಾಖಲಿಸಿದೆ.

ರೇಣುಕಾ ಶರ್ಮ 5ಕ್ಕಿಂತ ಹೆಚ್ಚು ಬಾರಿ 3 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆದ ಸಾಧನೆ ಮಾಡಿ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ನಾಕೌಟ್ ಹಂತದ ಪಂದ್ಯಗಳಲ್ಲಿ ಸ್ಮೃತಿ ಮಂದಾನ 4 ಬಾರಿ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments