ಎರಡು ಕೇಂದ್ರಾಡಳಿತ ಪ್ರದೇಶ ಹಾಗೂ 5 ರಾಜ್ಯಗಳು ಸೇರಿದಂತೆ 49 ಲೋಕಸಭಾ ಸ್ಥಾನಗಳಿಗೆ ಸೋಮವಾರ ನಡೆದ 5ನೇ ಹಂತದ ಚುನಾವಣೆಯಲ್ಲಿ ಸಂಜೆ 5 ಗಂಟೆವರೆಗೆ ಶೇ.56.68ರಷ್ಟು ಮತದಾನವಾಗಿದೆ.
ಬಂಗಾಳದ ಬಾರಕ್ ಪೂರ್, ಬಂಗೂನ್, ಆರಂಭಹ್ ಮತ್ತು ಹೌರಾ ಲೋಕಸಭಾ ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದ್ದು ಹೊರತುಪಡಿಸಿದರೆ ಉಳಿದೆಲ್ಲೆಡೆ ಶಾಂತಿಯುತ ಮತದಾನ ದಾಖಲಾಗಿದೆ.
5ನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಅಮೇಥಿ ಪ್ರಮುಖ ಆಕರ್ಷಣೆಯಾಗಿದ್ದು, ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಮತ್ತು ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಣದಲ್ಲಿದ್ದಾರೆ.
ಪಶ್ಮಿಮ ಬಂಗಾಳದಲ್ಲಿ ಗರಿಷ್ಠ ಶೇ.73, ಲಡಾಖ್ ನಲ್ಲಿ ಶೇ.67.15, ಜಾರ್ಖಂಡ್ ನಲ್ಲಿ ಶೇ.61.90ದಲ್ಲಿ ಮತದಾನವಾಗಿದ್ದರೆ ಮಹಾರಾಷ್ಟ್ರದಲ್ಲಿ ಅತ್ಯಂತ ಕನಿಷ್ಠ ಶೇ.48.66ರಷ್ಟು ಮತದಾನವಾಗಿದೆ.