ರಕ್ಷಣಾ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ 6.21 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.4.79ರಷ್ಟು ಹೆಚ್ಚು ಮೀಸಲಿಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿ ಮಂಡಿಸಿದ್ದು, ಉಳಿದ ಎಲ್ಲಾ ಸಚಿವರಿಗೆ ಹೋಲಿಸಿದರೆ ರಕ್ಷಣಾ ಇಲಾಖೆಗೆ ಅತೀ ಹೆಚ್ಚು ದೊಡ್ಡ ಮೊತ್ತ ಮೀಸಲಿಡಲಾಗಿದೆ.
ಒಟ್ಟಾರೆ ಬಜೆಟ್ ನಲ್ಲಿ ಶೇ.13ರಷ್ಟು ರಕ್ಷಣಾ ಇಲಾಖೆಗೆ ಮೀಸಲಿಡಲಾಗಿದ್ದು, ರಕ್ಷಣಾ ಕ್ಷೇತ್ರದ ಸ್ಟಾರ್ಟ್ ಅಪ್ ಗಳಿಗೆ 518 ಕೋಟಿ ರೂ. ಮೀಸಲಿಡಲಾಗಿದೆ.
ಗಡಿ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ 6500 ಕೋಟಿ ರೂ. ಮೀಡಲಿಸಲಾಗಿದೆ. ಕೋಸ್ಟ್ ಗಾರ್ಡ್ ವಿಭಾಗಕ್ಕೆ 7651 ಕೋಟಿ ರೂ. ಸೇರಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರಿಸಿದ್ದಾರೆ.