ಮುಸುಕುಧಾರಿ ಐಸಿಸ್ ಉಗ್ರರು ಏಕಾಏಕಿ ರಷ್ಯಾದ ರಾಜಧಾನಿ ಮಾಸ್ಕೊದ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ 60ಕ್ಕೂ ಹೆಚ್ಚು ಮಂದಿ ಮೃತಪಟ್ಟು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಸರ್ಕಸ್ ಹಾಲ್ ಮೇಲೆ ಉಗ್ರರು ಬಾಂಬ್ ಎಸೆದಿದ್ದು ಅಲ್ಲದೇ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಹೊಣೆಯಲ್ಲಿ ಐಸಿಎಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಇತ್ತೀಚೆಗಷ್ಟೇ ವ್ಲಾದಿಮಿರ್ ಪುಟಿನ್ ರಷ್ಯಾ ಅಧ್ಯಕ್ಷರಾಗಿ ಭಾರೀ ಅಂತರದಿಂದ ಜಯಭೇರಿ ಬಾರಿಸಿದ್ದರು. ಇದರ ಬೆನ್ನಲ್ಲೇ ಐಸಿಸ್ ಉಗ್ರರು ನಾಗರಿಕರನ್ನು ಕೇಂದ್ರೀಕರಿಸಿ ಭಾರೀ ಬಾಂಬ್ ದಾಳಿ ನಡೆಸಿದ್ದಾರೆ.