ಲೆಬೆನಾನ್ ನ ವಿಶ್ವಸಂಸ್ಥೆ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರಿಂದ ಶಾಂತಿಧೂತರಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರ ಸುರಕ್ಷತೆ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ.
ಶಾಂತಿಧೂತ ವಿಭಾಗದಲ್ಲಿ ವಿವಿಧ ದೇಶಗಳ ಸೇನಾ ಪಡೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 600 ಭಾರತೀಯ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಲೆಬೆನಾನ್ ಬಲ್ಲಿರುವ ಹೆಜಾಬುಲ್ಲಾ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸುತ್ತಿರುವ ಇಸ್ರೇಲ್ ಶುಕ್ರವಾರ ದಕ್ಷಿಣ ಲೆಬೆನಾನ್ ನಲ್ಲಿರುವ ವಿಶ್ವಸಂಸ್ಥೆ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಇಬ್ಬರು ಶಾಂತಿಧೂತರು ಗಾಯಗೊಂಡಿದ್ದರು.
ಶಾಂತಿಧೂತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600 ಭಾರತೀಯ ಯೋಧರ ಬಗ್ಗೆ ಭಾರತ ವಿದೇಶಾಂಗ ಸಚಿವಾಲಯ ಆತಂಕ ವ್ಯಕ್ತಪಡಿಸಿದ್ದು, ಇವರ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದೆ.