ಜಮ್ಮು ಕಾಶ್ಮೀರ ಸೇರಿದಂತೆ 9 ರಾಜ್ಯಗಳಲ್ಲಿ ಸೋಮವಾರ 4ನೇ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆ ವೇಳೆಗೆ ಶೇ.62.31ರಷ್ಟು ಮತದಾನವಾಗಿದೆ.
ಕೇಂದ್ರಾಡಳಿತ ಪ್ರದೇಶ ಹಾಗೂ 9 ರಾಜ್ಯಗಳು ಸೇರಿದಂತೆ 96 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಇದರಲ್ಲಿ 42 ಸ್ಥಾನಗಳು ಆಂಧ್ರಪ್ರದೇಶದ್ದಾಗಿದೆ.
ಆಂಧ್ರಪ್ರೆದೇಶದಲ್ಲಿ ಶೇ.67.99, ಬಿಹಾರದಲ್ಲಿ ಶೇ.5.14, ಒಡಿಶಾದಲ್ಲಿ ಶೇ.62.96, ಪಶ್ಚಿಮ ಬಂಗಾಳದಲ್ಲಿ 75.66, ಜಮ್ಮು ಕಾಶ್ಮೀರದಲ್ಲಿ ಶೇ.36, ತೆಲಂಗಾಣದಲ್ಲಿ ಶೇ.61, ಬಿಹಾರದಲ್ಲಿ ಶೇ.54.14, ಮಧ್ಯ ಪ್ರದೇಶದಲ್ಲಿ ಶೇ.58, ಮಹಾರಾಷ್ಟ್ರದಲ್ಲಿ ಶೇ.53, ಉತ್ತ ಪ್ರದೇಶದಲ್ಲಿ ಶೇ.56, ಜಾರ್ಖಂಡ್ ನಲ್ಲಿ ಶೇ.63.14ರಷ್ಟು ಮತದಾನವಾಗಿದೆ.