ಲೋಕಸಭಾ ಚುನಾವಣೆಯ 3ನೇ ಹಂತದ ಮತದಾನ ಮಂಗಳವಾರ ದೇಶಾದ್ಯಂತ 11 ರಾಜ್ಯಗಳ 93 ಕ್ಷೇತ್ರಗಳಿಗೆ ನಡೆದಿದ್ದು, ಶೇ.62.21ರಷ್ಟು ಮತದಾನ ದಾಖಲಾಗಿದೆ.
ಅಸ್ಸಾಂನಲ್ಲಿ ಅತೀ ಹೆಚ್ಚು ಶೆ.72.83ರಷ್ಟು ಮತದಾನ ದಾಖಲಾದರೆ, ಮಹಾರಾಷ್ಟ್ರದಲ್ಲಿ ಅತೀ ಕಡಿಮೆ ಶೇ.56.37ರಷ್ಟು ಮತದಾನ ಆಗಿದೆ.
ಪಶ್ಚಿಮ ಬಂಗಾಳದ ಕೆಲವು ಕಡೆ ಹಿಂಸಾಚಾರ ನಡೆದಿದ್ದು ಬಿಟ್ಟರೆ ಉಳಿದ 10 ರಾಜ್ಯಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತದಾನ ಮಾಡಿದರು. ಪ್ರಧಾನಿ ಮೋದಿ ವಾರಣಾಸಿಯಿಂದ ಸ್ಪರ್ಧಿಸಿದ್ದು, ಅವರ ಭವಿಷ್ಯವೂ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಸೇರಿದೆ.
ಅಸ್ಸಾಂ (4), ಬಿಹಾರ (5), ಛತ್ತೀಸಗಢ (7), ಗೋವಾ (2), ಗುಜರಾತ್ (26), ಕರ್ನಾಟಕ (14), ಮಹಾರಾಷ್ಟ್ರ (11), ಉತ್ತರ ಪ್ರದೇಶ (10), ಪಶ್ಚಿಮ ಬಂಗಾಳ (4), ದಾದ್ರಾ ಅಂಡ್ ನಗರ್ ಹವೇಲಿ ಅಂಡ್ ಡಿಯು ಅಂಡ್ ಡಮನ್ (2) ಕ್ಷೇತ್ರಗಳಿಗೆ ಮತದಾನ ನಡೆದಿದೆ.