ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 8 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಸುರಕ್ಷಿತ ರೈಲು ದುರಂತಗಳ ತುಲನೆ ಮಾಡಲಾಗುತ್ತಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಆಡಳಿತದಲ್ಲಿ 10 ವರ್ಷ ಪೂರೈಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಹಿಂದೆ 10 ವರ್ಷ ಪೂರೈಸಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಸರ್ಕಾರಗಳ ಅವಧಿಯಲ್ಲಿ ನಡೆದ ರೈಲು ದುರಂತಗಳ ತುಲನೆ ಮಾಡಲಾಗುತ್ತಿದೆ.
ಕವಚ ಸೇರಿದಂತೆ ರೈಲ್ವೆಯಲ್ಲಿ ಹಲವಾರು ನೂತನ ತಂತ್ರಜ್ಞಾನಗಳ ಮೂಲಕ ರೈಲು ಮಾರ್ಗಗಳ ಸುಧಾರಣೆ ಮೂಲಕ ದುರಂತಗಳಿಗೆ ಕಡಿವಾಣ ಹಾಕಿದ್ದರೂ ರೈಲು ದುರಂತಗಳು ಮರುಕಳಿಸುತ್ತಿವೆ. ಇದೆಲ್ಲದರ ನಡುವೆಯೂ ರೈಲು ದುರಂತ ಸಂಭವಿಸಿದ್ದಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಭವ್ ರಾಜೀನಾಮೆಗೆ ಒತ್ತಡಗಳು ಕೇಳಿ ಬರುತ್ತಿವೆ.
2014ರಿಂದ 2023ರ ಅವಧಿಯಲ್ಲಿ ಅಂದರೆ ಕಳೆದ 10 ವರ್ಷಗಳ ಎನ್ ಡಿಎ ಅವಧಿಯಲ್ಲಿ 638 ರೈಲು ಅಪಘಾತಗಳು ಸಂಭವಿಸಿವೆ. 2024ರಿಂದ 2014ರ ಯುಪಿಎ ಅವಧಿಯಲ್ಲಿ 1711 ರೈಲು ಅಪಘಾತಗಳು ಸಂಭವಿಸಿವೆ.
ಯುಪಿಎ ಅವಧಿಯಲ್ಲಿ ಸಂಭವಿಸಿದ ರೈಲು ದುರಂತದಲ್ಲಿ 2453 ಮಂದಿ ಅಸುನೀಗಿದ್ದರೆ, 4486 ಪ್ರಯಾಣಿಕರು ಗಾಯಗೊಂಡಿದ್ದಾರೆ. ಎನ್ ಡಿಎ ಅವಧಿಯಲ್ಲಿ 781 ಮಂದಿ ಮೃತಪಟ್ಟಿದ್ದು, 1543 ಮಂದಿ ಗಾಯಗೊಂಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎನ 2002-2014ರ ಅವಧಿಯಲ್ಲಿ 867 ರೈಲು ಹಳಿತಪ್ಪಿದ ಘಟನೆಗಳು ಸಂಭವಿಸಿದ್ದರೆ, 2014-2023ರ ಎನ್ ಡಿಎ ಅವಧಿಯಲ್ಲಿ 426 ರೈಲು ಹಳಿ ತಪ್ಪಿದ ಘಟನೆಗಳು ಸಂಭವಿಸಿವೆ.
ಎನ್ ಡಿಎ ಅವಧಿಯಲ್ಲಿ ರೈಲ್ವೆ ಹಳಿಗಳ ಅಭಿವೃದ್ದಿಗಾಗಿ 10,201 ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಡಲಾಗುತ್ತಿತ್ತು. ಆದರೆ ಯುಪಿಎ ಅವಧಿಯಲ್ಲಿ 4702 ಕೋಟಿ ರೂ. ಮಾತ್ರ ಮೀಡಲಿಡಲಾಗುತ್ತಿತ್ತು.
ಕಳೆದ 9 ವರ್ಷಗಳಲ್ಲಿ ರೈಲ್ವೆ ಇಲಾಖೆ ಸುರಕ್ಷತೆಗಾಗಿ 1,78,012 ಕೋಟಿ ರೂ. ವಿನಿಯೋಗಿಸಿದ್ದರೆ, ಯುಪಿಎ ಅವಧಿಯಲ್ಲಿ ರೈಲ್ವೆ ಇಲಾಖೆ 18,801 ಕೋಟಿ ರೂ. ವಿನಿಯೋಗಿಸುತ್ತಿತ್ತು ಎಂದು ಅಂಕಿ-ಅಂಶಗಳು ಹೇಳುತ್ತವೆ.