Thursday, November 21, 2024
Google search engine
Homeತಾಜಾ ಸುದ್ದಿಓವರ್ ಶಾಟ್ ನಿಂದ ರೈಲು ದುರಂತ: ಗೂಡ್ಸ್ ರೈಲಿನ 8 ಸಿಬ್ಬಂದಿ ಅಮಾನತು

ಓವರ್ ಶಾಟ್ ನಿಂದ ರೈಲು ದುರಂತ: ಗೂಡ್ಸ್ ರೈಲಿನ 8 ಸಿಬ್ಬಂದಿ ಅಮಾನತು

ಕಾಂಚನ್ ಜುಂಗ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಸಂಭವಿಸಿದ ದುರಂತಕ್ಕೆ ಓವರ್ ಶಾಟ್ ಕಾರಣ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಪಶ್ಚಿಮ ಬಂಗಾಳದ ಪ್ರೇಕ್ಷಣಿಯ ಸ್ಥಳವಾದ ಡಾರ್ಜಲಿಂಗ್ ನ ಜಲಪುರಿ ನಗರದ ರಂಗಪಾನಿ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಸ್ಸಾಂನ ಸಿಲಿಚಾರ್ ಮತ್ತು ಕೋಲ್ಕತಾದ ಅಗರ್ತಲಾ ನಗರಗಳ ನಡುವೆ ಸಂಚರಿಸುವ ಈ ರೈಲು ಚಿಕನ್ ಕಾರಿಡರ್ ಎಂದು ಕರೆಯಲಾಗುವ ಅತ್ಯಂತ ಕಡಿದಾದ ತಿರುವಿನಲ್ಲಿ ಸಂಚರಿಸುವಾಗ ಗೂಡ್ಸ್ ರೈಲು ಕಂಚನ್ ಜುಂಗ ಪ್ರಯಾಣಿಕ ರೈಲಿಗೆ ಡಿಕ್ಕಿ ಹೊಡೆದಿದೆ.

ಗೂಡ್ಸ್ ರೈಲಿನ ಪೈಲೆಟ್, ಸಹಾಯಕ ಪೈಲೆಟ್, ಕಾಂಚನ್ ಜುಂಗ ಎಕ್ಸ್ ಪ್ರೆಸ್ ರೈಲಿನ ಗಾರ್ಡ್, ಸೇರಿದಂತೆ 8 ಮಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಈ ಮಾರ್ಗದಲ್ಲಿ ಸಂಚರಿಸುವ 10ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಓವರ್ ಶಾಟ್ ಅಂದರೇನು?

ಡಾರ್ಜಲಿಂಗ್ ನ ಈ ರೈಲು ಮಾರ್ಗ ಅತ್ಯಂತ ಬಿಡುವಾಗಿದ್ದು, ಹೆಚ್ಚು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುವುದರಿಂದ ಸ್ವಯಂ ಚಾಲಿತ ಸಿಗ್ನಲ್ ಅಳವಡಿಸಲಾಗಿದೆ. ಇದನ್ನು ರೈಲು ಚಲಾಯಿಸುವ ಪೈಲೆಟ್ ಗಳು ಗಮನಿಸುತ್ತಾ ಇರಬೇಕು. ಹಲವು ರೈಲುಗಳು ಒಂದೇ ಸಮಯದಲ್ಲಿ ಸಂಚರಿಸುವುದರಿಂದ ಸಿಗ್ನಲ್ ಯಾವುದಕ್ಕೆ ನೀಡಲಾಗಿದೆ ಎಂದು ಗಮನಿಸುತ್ತಿರಬೇಕಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments