Thursday, November 21, 2024
Google search engine
Homeತಾಜಾ ಸುದ್ದಿಸ್ಮಾರ್ಟ್ ಫೋನ್ ಬಳಕೆಯಿಂದ 80 ಕೋಟಿ ಭಾರತೀಯರು ಬಡತನದಿಂದ ಮುಕ್ತ: ವಿಶ್ವಸಂಸ್ಥೆ ಶ್ಲಾಘನೆ

ಸ್ಮಾರ್ಟ್ ಫೋನ್ ಬಳಕೆಯಿಂದ 80 ಕೋಟಿ ಭಾರತೀಯರು ಬಡತನದಿಂದ ಮುಕ್ತ: ವಿಶ್ವಸಂಸ್ಥೆ ಶ್ಲಾಘನೆ

ಸ್ಮಾರ್ಟ್ ಫೋನ್ ಬಳಸುವುದರಿಂದ 80 ಕೋಟಿ ಭಾರತೀಯರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದು ವಿಶ್ವಸಂಸ್ಥೆ ಶ್ಲಾಘಿಸಿದೆ.

ವಿಶ್ವಸಂಸ್ಥೆ ಅಧ್ಯಕ್ಷ ಡೇನಿಸ್ ಫ್ರಾನ್ಸಿಸ್ ಫ್ರಾನ್ಸಿಸ್ ಡಿಜಿಟಲ್ ಕ್ರಾಂತಿ ಮತ್ತು ಗ್ರಾಮೀಣ ಪ್ರದೇಶಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ವಿಸ್ತಾರಗೊಳಿಸಿದ್ದರಿಂದ ಸುಮಾರು 80 ಕೋಟಿ ಭಾರತೀಯರು ಬಡತನದಿಂದ ಮುಕ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಹಾರ ಮತ್ತು ಕೃಷಿ ಸಂಘಟನೆ ಆಯೋಜಿಸಿದ್ದ ಹಸಿವು ಮುಕ್ತ ಪ್ರಸ್ತುತ ಮತ್ತು ಭವಿಷ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಫೋನ್ ಬಳಸುವ ಸರಳ ವಿಧಾನದಿಂದ ಕಳೆದ 5 ವರ್ಷಗಳಲ್ಲಿ 80 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ ಎಂದರು.

ಭಾರತದಲ್ಲಿ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಸ್ಮಾರ್ಟ್ ಫೋನ್ ಬಳಕೆ ಪ್ರಮಾಣ ಹೆಚ್ಚಿಸಿದೆ. ಬ್ಯಾಂಕಿಂಗ್ ಸೇವೆಗಳು ಮೊಬೈಲ್ ನಲ್ಲಿ ಸರಳವಾಗಿ ಸಿಗುತ್ತಿವೆ. ಇದರಿಂದ ಜನರು ಸುಲಭವಾಗಿ ಹಣದ ವ್ಯವಹಾರ ಮಾಡುವಂತಾಗಿದೆ ಎಂದು ಅವರು ವಿವರಿಸಿದರು.

ಸ್ಮಾರ್ಟ್ ಫೋನ್ ಬಳಕೆಯ ಲಾಭವನ್ನು ಭಾರತೀಯರು ಹೆಚ್ಚಾಗಿ ಪಡೆಯುತ್ತಿರುವುದರಿಂದ ಜಗತ್ತಿನ ಇತರೆ ದೇಶಗಳಂತೆ ಭಾರತ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಡಿಜಿಟಲಿಕರಣ ಭಾರತವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದೆ ಎಂದು ಫ್ರಾನ್ಸಿಸ್ ಅಭಿಪ್ರಾಯಪಟ್ಟರು.

ಭಾರತದ ಗ್ರಾಮೀಣ ರೈತರು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಎಂದಿಗೂ ಸಂಬಂಧ ಹೊಂದಿರಲಿಲ್ಲ, ಈಗ ತಮ್ಮ ಎಲ್ಲಾ ವ್ಯವಹಾರಗಳನ್ನು ತಮ್ಮ ಸ್ಮಾರ್ಟ್‌ಫೋನ್‌ ಮೂಲಕ ನಡೆಸಲು ಸಮರ್ಥರಾಗಿದ್ದಾರೆ. ಬಿಲ್ ಗಳ ಪಾವತಿ ಹೊಸ ಆರ್ಡರ್ ಮಾಡಲು ಸೇರಿದಂತೆ ಸಣ್ಣಪುಟ್ಟ ವಿಷಯಗಳಿಗೂ ಸ್ಮಾರ್ಟ್ ಫೋನ್ ಬಳಸುವಷ್ಟು ತಜ್ಞರಾಗಿದ್ದಾರೆ ಎಂದು ಅವರು ವಿವರಿಸಿದರು.

ಕಳೆದ 10 ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ಕೇಂದ್ರಗಳಲ್ಲಿ ಡಿಜಿಟಲೀಕರಣವು ಒಂದು. 2016 ರಲ್ಲಿ ರೂ 500 ಮತ್ತು ರೂ 1000 ನೋಟುಗಳ ಅಮಾನ್ಯೀಕರಣದ ನಂತರ, ಯುಪಿಐ ಪ್ರಮುಖ ಕೊಡುಗೆ ನೀಡುವ ಮೂಲಕ ಡಿಜಿಟಲ್ ಪಾವತಿ ವಹಿವಾಟುಗಳಲ್ಲಿ ಏರಿಕೆ ಕಂಡುಬಂದಿದೆ.

ಜನ್ ಧನ್, ಆಧಾರ್ ಮತ್ತು ಮೊಬೈಲ್ — JAM ಉಪಕ್ರಮದ ಮೂಲಕ ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಜನರನ್ನು ಒತ್ತಾಯಿಸಿದ್ದಾರೆ. ಉಪಕ್ರಮದ ಅಡಿಯಲ್ಲಿ, ಗ್ರಾಮೀಣ ಭಾರತದಲ್ಲಿ ಸೇರಿದಂತೆ ಲಕ್ಷಾಂತರ ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ.

ಬ್ಯಾಂಕ್ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಮತ್ತು ಜನರು ವಿವಿಧ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಡೆಯಬಹುದು ಮತ್ತು ಅವರ ಪಾವತಿಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯಬಹುದು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments