ಸೇನಾ ವಿಮಾನ ಪತನಗೊಂಡಿದ್ದರಿಂದ ಆಫ್ರಿಕಾ ಖಂಡದ ಮಲಾವಿ ಉಪಾಧ್ಯಕ್ಷ ಸೌಲಸ್ ಚಿಲಿಮಾ ಸೇರಿದಂತೆ 9 ಮಂದಿ ಅಸುನೀಗಿದ್ದಾರೆ.
ಉತ್ತರದ ಮುಜುಜುಗೆ ತೆರಳಿದ್ದ ವಿಮಾನ ಹವಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಲಿಲಾಂಗ್ವೆ ನಗರಕ್ಕೆ ಮರಳುವಂತೆ ಸೂಚಿಸಲಾಗಿತ್ತು. ಆದರೆ ದಟ್ಟವಾದ ಇಬ್ಬನಿಯಿಂದ ಆವರಿಸಿದ ಕಾಡಿನೊಳಗೆ ವಿಮಾನ ಪತನಗೊಂಡಿತ್ತು.
ಸುದೀರ್ಘ ಕಾರ್ಯಾಚರಣೆ ನಂತರ ವಿಮಾನ ಪತನಗೊಂಡ ಸ್ಥಳಕ್ಕೆ ರಕ್ಷಣಾಧಿಕಾರಿಗಳು ತಲುಪಿದ್ದು, 51 ವರ್ಷದ ಸೌಲಸ್ ಚಿಲಿಮಾ ದುರಂತದಲ್ಲಿ ಅಸುನೀಗಿದ್ದಾರೆ ಎಂದು ಮಲಾವಿ ಅಧ್ಯಕ್ಷ ಮಾಧ್ಯಮ ಪ್ರಕಟಣೆಯಲ್ಲಿ ಘೋಷಿಸಿದ್ದಾರೆ.
ರಕ್ಷಣಾ ಪಡೆಗಳು ಸ್ಥಳಕ್ಕೆ ತಲುಪಿದಾಗ ದುರಂತದಲ್ಲಿ ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿಮಾನದಲ್ಲಿದ್ದ ಯಾರೊಬ್ಬರೂ ಜೀವಂತವಾಗಿ ಉಳಿದಿಲ್ಲ ಎಂದು ತಿಳಿದು ಬಂದಿದೆ.